ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ(ರಿ), ಬೆಳ್ತಂಗಡಿ ತಾಲೂಕು ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಬೆಳ್ತಂಗಡಿ ಸ್ಪಂದನಾ ಸೇವಾ ಸಂಘ(ನಿ), ಬೆಳ್ತಂಗಡಿ ಇವುಗಳ ಸಹಯೋಗದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಇವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಕೆಸರ್ ಕಂಡೊಡು ಗೌಡರೆ ಗೌಜಿ-ಗಮ್ಮತ್ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದ ಪಥ ಸಂಚಲನ ವಾಣಿ ಶಿಕ್ಷಣ ಸಂಸ್ಥೆ ಗಳ ಆವರಣದಲ್ಲಿ ಪ್ರಾರಂಭಗೊಂಡು ಕೆಸರು ಗದ್ದೆ ಯ ಅಂಕಣದವರೆಗೂ ನಡೆಯಿತು.
ಗಮನ ಸೆಳೆದ ತುಳುನಾಡಿನ ಸಂಪ್ರದಾಯದ ವೇಷ ಭೂಷಣ: ತುಳುನಾಡಿನ ಸಂಪ್ರದಾಯದಂತೆ ಪುರುಷರು ಮತ್ತು ಮಹಿಳೆಯರು ಕತ್ತಿ, ಮುಟ್ಟಲೆ, ಕುರ, ತಡ್ಪೆ, ಗೊಬ್ಬರ ಬುಟ್ಟಿ, ಕೊಂಬು, ಕಹಳೆ, ಎತ್ತಿನಗಾಡಿ, ಕುದುರೆಗಾಡಿ, ಕೀಲು ಕುದುರೆ, ಪುರುಷರೆ ವೇಷ ಕಂಬಳದ ಜೋಡಿ ಕೋಣ, ಭೂತರಾಧನೆಯ ಪರಿಕರಗಳು, ಕೋಳಿ ಅಂಕಕ್ಕೆ ಸಜ್ಜಾದ ಕೋಳಿ, ಕೋವಿ,ಚೆನ್ನೆಮನೆ, ಯಕ್ಷಗಾನದ ವೇಷ, ಮುಡಿ ಅಕ್ಕಿ, ಇನ್ನು ಹತ್ತು ಹಲವು ವೇಷಗಳು ನೋಡುಗರ ಕಣ್ಮನ ಸೆಳೆಯಿತು.
ಗೌಡ ಸಂಪ್ರದಾಯದಂತೆ ಉಡುಗೆ ತೊಟ್ಟು ಕಂಗೊಳಿಸಿದ ಪ್ರಮುಖರು ಗೌಡ ಸಂಪ್ರದಾಯದಂತೆ ಆಗಮಿಸಿದ ಅತಿಥಿಗಳು ಮತ್ತು ಯುವ ವೇದಿಕೆ ಸದಸ್ಯರು ಮತ್ತು ಮಹಿಳಾ ವೇದಿಕೆ ಸದಸ್ಯರು ಕಂಗೊಳಿಸಿದರು. ಇದರ ಜೊತೆ ಮದುಮಗ, ಮದುಮಗಳ ವೇಷಧಾರಿಗಳು ವಿಶೇಷ ಗಮನ ಸೆಳೆದರು. ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ ನಾಯಕ್ ಮೆರವಣಿಗೆಗೆ ಚಾಲನೆ ನೀಡಿದರು.