ಮೈಸೂರು ಚಲೋ ಪಾದಯಾತ್ರೆಯಲ್ಲಿ ಎಂಎಲ್ಸಿ ಪ್ರತಾಪಸಿಂಹ ನಾಯಕ್ ಸಹಿತ ನೂರಾರು ಬಿಜೆಪಿ, ಯುವಮೋರ್ಚಾ ಕಾರ್ಯಕರ್ತರು ಭಾಗಿ- ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಪಾದಯಾತ್ರೆ: ಹರೀಶ್ ಪೂಂಜ

0

ಬೆಳ್ತಂಗಡಿ: ರಾಜ್ಯವನ್ನು ಭ್ರಷ್ಟಚಾರ ಮುಕ್ತ ಮಾಡಬೇಕೆಂಬ ದೃಷ್ಟಿಯಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್‌ನ ಸಿದ್ದರಾಮಯ್ಯನರವರ ಸರ್ಕಾರವನ್ನು ಕಿತ್ತೊಗೆಯಲು ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಬೆಳ್ತಂಗಡಿ ಶಾಸಕ, ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಂಜ ತಿಳಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಹಗರಣಗಳ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ಭಾಗವಹಿಸಿರುವ ಅವರು ಆ.7ರಂದು ಸುದ್ದಿ ಬಿಡುಗಡೆಯೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯರ ಭ್ರಷ್ಟಾಚಾರದ ಸರಕಾರವನ್ನು ಕೆಳಗಿಳಿಸಬೇಕೆಂಬ ಪಣ ತೊಟ್ಟಿರುವ ಬಿಜೆಪಿ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಜೆ.ಡಿ.ಎಸ್. ಪಕ್ಷವನ್ನು ಸೇರಿಸಿಕೊಂಡು ಬೃಹತ್ ಪಾದಯಾತ್ರೆ ಮಾಡುತ್ತಿದ್ದು, ಇಂದು ಐದನೇ ದಿನಕ್ಕೆ ತಲುಪಿದೆ. ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡಬೇಕೆಂಬ ದೃಷ್ಟಿಯಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿದ್ದರಾಮಯ್ಯರವರ ಸರ್ಕಾರವನ್ನು ಕಿತ್ತೊಗೆಯಲು ಜನ ಒಂದಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಸಿದ್ದರಾಮಯ್ಯ ಶೀಘ್ರವೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ಬೆಳ್ತಂಗಡಿಯಿಂದ ಸಾವಿರಕ್ಕೂ ಅಧಿಕ ಮಂದಿ: ಆ.6ರಂದು 20 ಸಾವಿರಕ್ಕಿಂತಲೂ ಹೆಚ್ಚು ಜನ ಪಾದಯಾತ್ರೆಯಲ್ಲಿ ಸೇರಿದ್ದರು. ಇವತ್ತು ೩೦ ಸಾವಿರಕ್ಕಿಂತಲೂ ಹೆಚ್ಚು ಜನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯರ ಭ್ರಷ್ಟಚಾರದ ಸರ್ಕಾರವನ್ನು ಕಿತ್ತೊಗೆಯಬೇಕು ಎಂಬ ಸಂಕಲ್ಪದೊಂದಿಗೆ ಪಾದಯಾತ್ರೆ ಮುನ್ನಡೆಯುತ್ತಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಇವತ್ತು ಒಂದು ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಭಾಗವಹಿಸಿದ್ದಾರೆ ಎಂದು ಹರೀಶ್ ಪೂಂಜ ತಿಳಿಸಿದರು.

ಬೆಳ್ತಂಗಡಿಯಿಂದ ಬಸ್, ಕಾರುಗಳಲ್ಲಿ ಪ್ರಯಾಣ: ಆ.3ರಂದು ಬೆಂಗಳೂರಿನಿಂದ ಹೊರಟಿರುವ ಪಾದಯಾತ್ರೆ ಆ.10ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶದೊಂದಿಗೆ ಸಮಾರೋಪಗೊಳ್ಳಲಿದೆ. ಪಾದಯಾತ್ರೆಯಲ್ಲಿ ಭಾಗವಹಿಸಲು ಆ.2ರಂದೇ ಬೆಳ್ತಂಗಡಿಯ ಬಿಜೆಪಿ ಯುವಮೋರ್ಚಾ ತಂಡ ತೆರಳಿದೆ. ನಂತರವೂ ಪ್ರತಿದಿನವೆಂಬಂತೆ ಬೆಳ್ತಂಗಡಿಯಿಂದ ಬಿಜೆಪಿ ಕಾರ್ಯಕರ್ತರು, ಸ್ಥಳೀಯ ನಾಯಕರು, ಹರೀಶ್ ಪೂಂಜರ ಬೆಂಬಲಿಗರು ಪಾದಯಾತ್ರೆಯನ್ನು ಸೇರಿಕೊಳ್ಳುತ್ತಿದ್ದಾರೆ. ಆ.7ರಂದು ಬೆಳ್ತಂಗಡಿಯಿಂದ ೫ ಬಸ್ಸುಗಳಲ್ಲಿ ೨೫೦ರಷ್ಟು ಕಾರ್ಯಕರ್ತರು ಮಂಡ್ಯಕ್ಕೆ ತೆರಳಿದ್ದು, ಪಾದಯಾತ್ರೆಯಲ್ಲಿ ಹರೀಶ್ ಪೂಂಜರ ಜತೆಯಾಗಿದ್ದಾರೆ.

ಮೊದಲ ತಂಡದಲ್ಲಿದ್ದವರು: ಪಾದಯಾತ್ರೆಗೆ ಆ.2ರಂದು ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾದ ತಂಡ ತೆರಳಿದೆ. ಇದರಲ್ಲಿ ದ.ಕ. ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಬೆಳ್ತಂಗಡಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ, ಉಪಾಧ್ಯಕ್ಷರಾದ ಗಣೇಶ್ ಲಾಯಿಲ, ಪ್ರಕಾಶ್ ಬಾರ್ಯ, ಕಾರ್ಯದರ್ಶಿ ಸುಧೀರ್ ಪೂಜಾರಿ ಚಾರ್ಮಾಡಿ, ಗಿರೀಶ್ ಗೌಡ ಬಿ.ಕೆ. ಬಂದಾರು, ಹರೀಶ್ ಗೌಡ ಸಂಬೊಲ್ಯ, ಕೋಶಾಧಿಕಾರಿ ಸ್ವಸ್ತಿಕ್ ಹಟತ್ತೋಡಿ ಕುಕ್ಕಳ ಹಾಗೂ ಕಾರ್ಯಕಾರಿಣಿ ಸದಸ್ಯರು, ಯುವಮೋರ್ಚಾ ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ಪ್ರತಾಪಸಿಂಹ ನಾಯಕ್ ಭಾಗಿ: ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ ಹಾಗೂ ಜಯಾನಂದ ಗೌಡ, ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ, ಸೀತರಾಮ ಬೆಳಾಲು, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಗಣೇಶ್ ಗೌಡ ನಾವರ, ಜಿಲ್ಲಾ ಮಹಿಳಾ ಮಂಡಲ ಉಪಾಧ್ಯಕ್ಷೆ ವಿಜಯ ಆರಂಬೋಡಿ, ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ, ಚೆನ್ನಕೇಶವ ಮುಂಡಾಜೆ, ವೇದಾವತಿ, ಮೋಹನ್ ಅಂಡಿಂಜೆ, ಕೋಶಾಧಿಕಾರಿ ಜಯಂತ್ ಗೌಡ ಗುರಿಪಳ್ಳ, ಕಾರ್ಯಾಲಯ ಕಾರ್ಯದರ್ಶಿ ಜಯಾನಂದ ಕಲ್ಲಾಪು, ಮಂಡಲ ಕಾರ್ಯದರ್ಶಿ ಪ್ರಭಾಕರ ಸವಾಣಾಲು, ಸುಂದರ್ ಹೆಗ್ಡೆ ಮಂಡಲ ಕಾರ್ಯದರ್ಶಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಗಣೇಶ್ ಗೌಡ ನಾವೂರು, ಶಿರ್ಲಾಲು ಸಿ.ಎ. ಬ್ಯಾಂಕ್ ಅಧ್ಯಕ್ಷ ನವೀನ್ ಸಾಮಾನಿ, ಧರ್ಮಸ್ಥಳ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರೀತಂ ಡಿ. ಧರ್ಮಸ್ಥಳ, ಮಾಜಿ ಜಿಪಂ ಸದಸ್ಯ ಕೊರಗಪ್ಪ ನಾಯ್ಕ್, ಮಂಡಲ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಹಾಗೂ ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾ ಪದಾಧಿಕಾರಿಗಳ, ಶಕ್ತಿಕೇಂದ್ರ ಪ್ರಮುಖರು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದಾರೆ.

ಪದಾಧಿಕಾರಿಗಳೊಂದಿಗೆ ಪೂಂಜ ಸಭೆ: ಮೈಸೂರು ಚಲೋ ಪ್ರತಿಭಟನಾ ಪಾದಯಾತ್ರೆಯ ನಿರ್ವಹಣೆ ಕುರಿತು ಹರೀಶ್ ಪೂಂಜ ಆ.೧ರಂದು ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಪಕ್ಷದ ಪದಾಧಿಕಾರಿಗಳೊಂದಿಗೆ ಸಿದ್ಧತಾ ಸಭೆ ನಡೆಸಿದರು.

ನ್ಯಾಯಪರ ಹೋರಾಟದಲ್ಲಿ ಭಾಗಿ: ನ್ಯಾಯಪರ ಹೋರಾಟಕ್ಕಾಗಿ ನಾವು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿzವೆ. ಕಾಂಗ್ರೆಸ್ ಸರಕಾರದ ಹಗರಣ ಜಗಜ್ಜಾಹೀರಾಗಿದ್ದು, ನೈತಿಕತೆ ಮರೆತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಪಗಳು ಬಂದು, ಪೂರಕ ಸಾಕ್ಷಿ, ದಾಖಲೆಗಳು ಸಿಕ್ಕಿದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ. ಭಂಡತನದ ನಾಯಕರು ಭಂಡತನದಲ್ಲೇ ಎಲ್ಲವನ್ನೂ ಎದುರಿಸಲು ನೋಡುತ್ತಾರೆ. ಅಂಥ ನಾಯಕರಿಂದ ಬೇರೆ ಏನೂ ನಿರೀಕ್ಷೆ ಮಾಡಲಾಗದು ಎಂದು ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಹೇಳಿದರು.

LEAVE A REPLY

Please enter your comment!
Please enter your name here