ಶಿಬಾಜೆ: ಪೊಸೋಡಿ – ಬಂಗೇರಡ್ಕ ರಸ್ತೆಯು ಪಂಚಾಯತ್ ಗೆ ಸೇರಿದ ಕಚ್ಚಾ ರಸ್ತೆಯಾಗಿದ್ದು ದುರಸ್ತಿಗೊಳ್ಳದೆ ಹಲವು ವರ್ಷಗಳೇ ಕಳೆದಿದೆ. ಕಾಡು ದಾರಿಯಲ್ಲಿರುವ ಈ ರಸ್ತೆಯಲ್ಲಿ ಚರಂಡಿ ವ್ಯವಸ್ಥೆಗಳು ಸರಿ ಇಲ್ಲದೆ ನೀರು ಮಾರ್ಗದಲ್ಲೆ ಹರಿದು ರಸ್ತೆಯ ಕೆಲವು ಭಾಗದ ಮಣ್ಣು ಕೊಚ್ಚಿಕೊಂಡು ಬಂದು ಇನ್ನೊಂದು ಭಾಗದಲ್ಲಿ ನಿಂತು ಕೆಸರು ಗದ್ದೆಯoತಾಗಿದೆ.
ಶಾಲಾ ಮಕ್ಕಳನ್ನು ಈ ರಸ್ತೆಯಲ್ಲಿ ಕರೆದುಕೊಂಡು ಬರುವುದೇ ದೊಡ್ಡ ಸವಾಲು: ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಬೀಸುತ್ತಿರುವ ಗಾಳಿ ಈ ರಸ್ತೆಯಲ್ಲಿ ಮಕ್ಕಳು ನಡೆದುಕೊಂಡು ಬಂದರೆ ಶಾಲೆ ತಲುಪುವುದರ ಒಳಗೆ ಬಟ್ಟೆ ಪೂರ್ತಿ ಕೊಳೆ ಗ್ಯಾರಂಟಿ. ಪೋಷಕರು ಗಾಡಿಯಲ್ಲಿ ಕರೆತರಲು ಮನಸ್ಸು ಮಾಡಿದರೆ ಗಾಡಿ ಲಗಾಡಿ. ಒಟ್ಟಿನಲ್ಲಿ ಹರಾಸಾಹಸ ಎನ್ನುತ್ತಿದ್ದಾರೆ ಸ್ಥಳೀಯರು.
4 ಕಡೆ ಮೋರಿ ಅವಶ್ಯವಾಗಿ ಅಳವಡಿಸಬೇಕು: ಕಾಡಿನ ಮಧ್ಯ ಮಾರ್ಗ ಇರುವುದರಿಂದ ನೀರು ಅಲ್ಲಲ್ಲಿ ದೊಡ್ಡ ಪ್ರಮಾಣದಲ್ಲಿ ಹರಿಯುವುದರಿಂದ ಮೋರಿ ಅವಶ್ಯಕವಾಗಿ ಅಳವಡಿಸಲೇ ಬೇಕು ಎನ್ನುತ್ತಿದ್ದಾರೆ ಸ್ಥಳೀಯರು.
p>