ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾದ್ಯಂತ ಜು.29ರಂದು ರಾತ್ರಿ ವೇಳೆಯಲ್ಲಿ ಸುರಿದ ಭಾರಿ ಮಳೆಗೆ ನದಿ ತೊರೆಗಳು ತುಂಬಿ ಹರಿಯುತ್ತಿದ್ದು ನದಿ ತೀರ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.ಕಲ್ಮಂಜ ಸಂಗಮ ಕ್ಷೇತ್ರ ಪಜಿರಡ್ಕ ನೇತ್ರಾವತಿ ಮೃತ್ಯುಂಜಯ ನದಿಗೆ ಗಂಗಾ ಪೂಜೆಯನ್ನು ನೆರವೇರಿಸಿದರು.ಸೋಮವಾತಿ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಮುಂಡಾಜೆಯ ಬಲ್ಯಾರಕಾಪು ಮೃತ್ಯುಂಜಯ ನದಿಯಲ್ಲಿ ಏಕಾಏಕಿ ಏರಿದ ನೀರು, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ ನದಿ ಆಸುಪಾಸಿನ ಜಾಗೃತ ವಹಿಸುವುದು ಸೂಕ್ತ.
ಮತ್ತೆ ಕರಾವಳಿಯಲ್ಲಿ ಏಳು ದಿನಗಳ ಕಾಲ ಭಾರಿ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದೆ.ಮಲವಂತಿಗೆ ದಿಡುಪೆ, ಕಿಲ್ಲೂರು ಭಾಗಗಳಲ್ಲಿ ರಾತ್ರಿ ಭಾರೀ ಮಳೆ ಸುರಿದಿದ್ದು ಲಾಯಿಲ ಗ್ರಾಮದ ಪುತ್ರಬೈಲು, ಗುರಿಂಗಾನ ಸುತ್ತಮುತ್ತ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಜನರ ಆತಂಕಕ್ಕೆ ಕಾರಣವಾಗಿತ್ತು. ಇವತ್ತು ಕೂಡ ಮಳೆ ಹೆಚ್ಚಾಗಿದ್ದು ನದಿ, ತೊರೆಗಳಲ್ಲಿ ನೀರು ಹೆಚ್ಚಾಗುವ ಸಂಭವ ಇದೆ.ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರ ಬ್ಲಾಕ್ ಆಗಿದ್ದು, ಮರ ತೆರವು ಕೆಲಸ ನಡೆಯುತ್ತಿದೆ ಎಂಬ ಮಾಹಿತಿ ಬಂದಿದೆ.