ಮುಂಡಾಜೆ: ಬಂಟರ ಗ್ರಾಮ ಸಮಿತಿ ಇದರ ವತಿಯಿಂದ ಜುಲೈ 28ರಂದು ಮುಂಡಾಜೆ ಪಂಚಾಯತ್ ಭವನದಲ್ಲಿ ಆಟಿದ ಕೂಟ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಡಾಜೆ ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ಅಗರಿ ರಾಮಣ್ಣ ಶೆಟ್ಟಿ ಮತ್ತು ಮುಂಡ್ರುಪಾಡಿ ವಿಶ್ವನಾಥ ಶೆಟ್ಟಿ ಹಾಗೂ ಉಜಿರೆ ವಲಯ ಬಂಟರ ಸಂಘದ ಅಧ್ಯಕ್ಷೆ ವನಿತಾ ಶೆಟ್ಟಿ ಇವರು ದೀಪ ಬೆಳಗಿಸಿ ಮತ್ತು ಚೆಣ್ಣೆ ಮಣೆ ಆಡುವುದರ ಮೂಲಕ ನೆರವೇರಿಸಿದರು.
ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಗರಿ ಇವರು ಆಟಿದ ದಿನದ ಮಹತ್ವದ ಬಗ್ಗೆ ತಿಳಿಸಿದರು. ಜೊತೆ ಕಾರ್ಯದರ್ಶಿ ನವೀನ್ ಶೆಟ್ಟಿ ಇವರು ನಿರೂಪಿಸಿ, ಕಾರ್ಯದರ್ಶಿ ವಿಜಯಕುಮಾರ್ ರೈ ಇವರು ವಂದಿಸಿದರು. ಪ್ರಸಾದ್ ಶೆಟ್ಟಿ ಮಂಜುಶ್ರೀ ನಗರ ಮತ್ತು ನಾರಾಯಣ ಶೆಟ್ಟಿ ಮಂಜುಶ್ರೀ ನಗರ ಇವರು ವಿವಿಧ ಭಕ್ತಿ ಸುಗಿಪು ಹಾಡುಗಳು ಮತ್ತು ಸಂದಿ ಪಾಡ್ದನಗಳನ್ನು ಹಾಡಿದರು.
ಬಳಿಕ ತುಳುನಾಡ ಸಿರಿ ಎಂಬ ಯಕ್ಷಗಾನ ತಾಳಮದ್ದಳೆಯನ್ನು ಗ್ರಾಮದ ಬಂಟ ಕಲಾವಿದರು ನೆರವೇರಿಸಿದರು. ಗ್ರಾಮ ಸಮಿತಿಯ ಸದಸ್ಯರು ಆಟಿ ತಿಂಗಳಿನ ವಿವಿಧ ತಿಂಡಿ ತಿನಿಸುಗಳನ್ನು ತಂದು ಶಿವರಾಜ್ ರೈ ಸೋಮಂತಡ್ಕ ಇವರ ಮನೆಯಲ್ಲಿ ಭೋಜನ ಕೂಟ ವನ್ನು ಏರ್ಪಡಿಸಿದರು. ಗ್ರಾಮ ಸಮಿತಿಯ ಎಲ್ಲಾ ಸದಸ್ಯರು ಸಹಕರಿಸಿದರು.