ಮಳೆಹಾನಿಗೊಳಗಾದ ನೆರಿಯಕ್ಕೆ ಶಾಸಕ‌ ಪೂಂಜ ಭೇಟಿ- ವೈಯಕ್ತಿಕ ನೆಲೆಯಲ್ಲಿ ಧನಸಹಾಯ- ಸರ್ಕಾರಕ್ಕೆ ಒತ್ತಾಯಿಸುವ ಭರವಸೆ

0

ನೆರಿಯ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ಜುಲೈ 25ರಂದು ಸುರಿದ ಭಾರಿ ಗಾಳಿ ಮಳೆಗೆ ಅನೇಕ ಮನೆಗಳಿಗೆ ಹಾನಿ ಉಂಟಾಗಿತ್ತು, ಇಲ್ಲಿನ ಜನರು ಮನೆಯಲ್ಲಿ ವಾಸಿಸಲು ತುಂಬ ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಹಾನಿಗೊಳಗಾದ ಕೃಷ್ಣಪ್ಪ ಕೋಲೋಡಿ, ಪದ್ಮನಾಭ ಆಚಾರಿ, ದಯಾನಂದ ಗೌಡ, ಅಣ್ಣುಗೌಡ, ಕುಳೆನಾಡಿ ರಾಮಯ್ಯ ಗೌಡ, ಜಯಂತ ಪಾದೆ, ಆನಂದ ಅಣಿಯೂರು, ಶೇಖರ ಕುಳೆನಾಡಿ, ನವೀನ್ ಕುಳೆನಾಡಿ, ಗಂಗಾಧರ ಗೌಡ, ಗಣೇಶ್ ಕಡ್ಡಿಬಾಗಿಲು, ಶಾಜಿ ಪರ್ವಕರ್ ರವರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಜುಲೈ 27ರಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಧೈರ್ಯ ತುಂಬಿ ತನ್ನ ಸ್ವಂತ ಖರ್ಚಿನಲ್ಲಿ ಸಣ್ಣ ಮಟ್ಟಿನ ಧನಸಹಾಯವನ್ನು ಸ್ಥಳದಲ್ಲಿ ನೀಡಿ ಮಾನವೀಯತೆ ಮೆರೆದು ಹೆಚ್ಚಿನ ಪರಿಹಾರಕ್ಕೆ ಸರ್ಕಾರಕ್ಕೆ ಮತ್ತು ಸಂಬಂಧ ಪಟ್ಟ ಇಲಾಖೆಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು‌.

ನಂತರ ನೆರಿಯ ಬಯಲು ಶಾಲೆಗೆ ಭೇಟಿ ನೀಡಿ ಅತಿ ಹೆಚ್ಚು ಮಕ್ಕಳಿರುವ ಸರ್ಕಾರಿ ಶಾಲೆಯಾಗಿದ್ದು ಸುಸರ್ಜಿತ ಕಟ್ಟಡ ಮತ್ತು ಶೌಚಾಲಯವನ್ನು ಮುಂದಿನ ದಿನಗಳಲ್ಲಿ ನಿರ್ಮಿಸಿ ಕೊಡಲಾಗುವು ಎಂದು ಹೇಳಿದರು.

ಈ ಸಂದರ್ಭದಲ್ಲಿ ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಸಜಿತಾ, ಸದಸ್ಯರಾದ ಕುಶಲ, ವೇದಾವತಿ, ದಿನೇಶ್, ಸವಿತಾ, ಮಾಲತಿ, ಸಚಿನ್, ಬಾಬು ಗೌಡ ಹಾಗೂ ಉಜಿರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶವಂತ್ ಗೌಡ, ಶಕ್ತಿ ಕೇಂದ್ರ ಅದ್ಯಕ್ಷ ವಿಶ್ವನಾಥ್ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here