


ಕಳಿಯ: ಕಳಿಯ ಗ್ರಾಮದ ಜನ ವಸತಿ ಹಾಗೂ ವಾರ್ಡ್ ಸಭೆ ನಾಳ ಹಾಲು ಉತ್ಪಾದಕರ ಸಂಘದ ಸಭಾಂಗಣದಲ್ಲಿ ಜು.24ರಂದು ನಡೆಯಿತು.

ಕಳೆದ ಗ್ರಾಮ ಸಭೆಯ ನಡವಳಿಕೆ ಬಗ್ಗೆ ಅನುಪಾಲನ ವರದಿ, ಗ್ರಾಮಸ್ಥರು ವಿವಿಧ ಬೇಡಿಕೆಯ ಅರ್ಜಿ ಸ್ವೀಕರಿಸಿದರು. ಗ್ರಾಮದಲ್ಲಿ ಮಳೆ ನೀರು ಚರಂಡಿ ಸಮಸ್ಯೆ, ಕುಡಿಯುವ ನೀರಿನ ಸರಬರಾಜು, ವಿದ್ಯುತ್ ಸಮಸ್ಯೆ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸಿದರು.


ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯತು ಸದಸ್ಯರಾದ ಸುಧಾಕರ ನಾಯ್ಕ, ವಿಜಯ ಕುಮಾರ್ ಕೆ, ಯಶೋಧರ ಶೆಟ್ಟಿ ಕೆ., ಕುಸುಮ ಎನ್.ಬಂಗೇರ., ಮೋಹಿನಿ ಬಿ.ಗೌಡ., ಲತೀಪ್, ಪುಷ್ಪ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.









