ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯವು ರಜತ ಸಂಭ್ರಮದ ಮೆರುಗನ್ನು ಅನುಭವಿಸುತ್ತಿರುವ ಈ ಸಂದರ್ಭದಲ್ಲಿ, ಅಪರೂಪದ ಒಂದು ಕಾರ್ಯಕ್ರಮ ನೆಲ್ಯಾಡಿಯಲ್ಲಿ ನಡೆಯಿತು. ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ನಡೆದ ವಾರ್ಷಿಕ ನೋವೇನಾ ಮಹೋತ್ಸವದ ಸಂದರ್ಭದಲ್ಲಿ, ಬೆಳ್ತಂಗಡಿ ಧರ್ಮಾಧ್ಯಕ್ಷ ಅತಿವಂದನೀಯ ಲಾರೆನ್ಸ್ ಮುಕ್ಕುಯಿ ಅವರ ಆಪ್ತ ಸಹಾಯಕ ಹಾಗೂ ನಿಷ್ಠಾವಂತ ವಾಹನ ಚಾಲಕರಾಗಿ 25 ವರ್ಷಗಳ ಸೇವೆ ಸಲ್ಲಿಸಿರುವ ಬೆಳ್ತಂಗಡಿ ಉದಯನಗರ ನಿವಾಸಿ ಬಿಜು ಪಾರಪ್ಪುರಮ್ ಅವರನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು.
ಬಿಜು ಅವರ ನಿಷ್ಠೆ, ಸೇವಾ ಮನೋಭಾವನೆ, ಶ್ರದ್ದೆ ಮತ್ತು ಕರ್ಮ ಕುಶಲತೆಯನ್ನು ಧರ್ಮಗುರುಗಳಾದ ವಂದನೀಯ ಫಾದರ್ ಶಾಜಿ ಮಾತ್ಯು ಬಣ್ಣಿಸಿ, ಅವರ ಸೇವೆಯನ್ನು ಪ್ರಶಂಸೆ ಮಾಡಿದರು. ಈ ಸಂದರ್ಭದಲ್ಲಿ ಧರ್ಮಾಧ್ಯಕ್ಷರಾದ ಅತಿವಂದನೀಯ ಮಾರ್ ಲಾರೆನ್ಸ್ ಮುಕ್ಕುಯಿ, ಬೆಳ್ತಂಗಡಿ ಧರ್ಮ ಪ್ರಾಂತ್ಯದ ಚಾನ್ಸಲರ್ ವಂದನೀಯ ಫಾದರ್ ಲಾರೆನ್ಸ್ ಪೂಣೋಲಿಲ್, ವಂದನೀಯ ಸಿಸ್ಟರ್ ಲಿಸ್ ಮಾತ್ಯು ಎಸ್.ಎಚ್., ಟ್ರಸ್ಟಿಗಳಾದ ಅಲೆಕ್ಸ್, ಫಾದರ್ ಎಬಿನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ನಡೆದ ಈ ಸನ್ಮಾನ ಕಾರ್ಯಕ್ರಮವು ಬಿಜು ಅವರ ಸೇವಾ ಮನೋಭಾವನೆಗೆ ಗೌರವ ಸಲ್ಲಿಸುವುದರೊಂದಿಗೆ, ಬರುವ ದಿನಗಳಲ್ಲಿ ಧರ್ಮ ಪ್ರಾಂತ್ಯದ ಇತರರನ್ನು ಸ್ಫೂರ್ತಿ ನೀಡಲು ಕಾರಣವಾಯಿತು.