ಉಜಿರೆ: 2023-24ನೇ ಸಾಲಿನಲ್ಲಿ ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆಯಲ್ಲಿ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ತುಳು ವಿಷಯದಲ್ಲಿ 100 ಶೇಕಡಾ ಅಂಕವನ್ನು ಗಳಿಸಿದ ಎಲ್ಲಾ 12 ವಿದ್ಯಾರ್ಥಿಗಳನ್ನು ಜುಲೈ 20ರಂದು ನಡೆದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 30ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಪ್ರತೀಕ್ಷಾ, ಮೌಲ್ಯ, ರಕ್ಷಾ, ಭವ್ಯ, ಕೃತಿ, ಸುವರ್ಣಮಾಗಿ, ಶಾಲಿನಿ, ಅನ್ವಿತ್, ರಕ್ಷಿತ್, ಸಂಜಯ್.ಬಿ, ಜಯದೀಶ್ ಮತ್ತು ಸಂಜಯ್ ಇವೆರೆಲ್ಲರು ಸಾಧನೆಯನ್ನು ಮಾಡಿದ್ದು ಇವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆವಿಯಿಂದ ಗೌರವಿಸಲಾಯಿತು.
ಈ ವಿದ್ಯಾರ್ಥಿಗಳ ಸಾಧನೆಗೆ ಕಾರಣಕರ್ತರಾದ ತುಳು ಭಾಷಾ ಶಿಕ್ಷಕಿ ತ್ರಿವೇಣಿಯವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆವಿಯಿಂದ ವೇದಿಕೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿ ಶಾಲೆಯ ಬಗ್ಗೆ ಮತ್ತು ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.21-22ನೇ ಸಾಲಿನಲ್ಲಿ ಕೂಡ ಶಿಕ್ಷಕಿ ತ್ರಿವೇಣಿಯವರಿಗೆ “ಬಲೆ ತುಳು ಕಲ್ಪುಗ ಪ್ರಶಸ್ತಿ ಪ್ರದಾನವಾಗಿದ್ದು 2022-23ನೇ ಸಾಲಿನ ಕೊಯ್ಯೂರು ಪ್ರೌಢ ಶಾಲೆಯಲ್ಲಿ ಆಯೋಜಿಸಲಾದ ತುಳು ಜಾನಪದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ಹಾಗೂ ಪೋಷಕರ ಪೋತ್ಸಾಹದಿಂದ ಪ್ರತಿವರ್ಷವೂ ಹೆಚ್ಚಿನ ಮಕ್ಕಳು ಶೇಕಡ 100 ಅಂಕಗಳಿಸುವಂತೆ ತರಬೇತುಗೊಳಿಸಲಾಗುತ್ತಿದೆ. ಬಿ.ಎಸ್.ಎಫ್ ನಿವೃತ್ತ ಯೋಧ ಪ್ರಸಾದ ಡಿ.ಯವರ ಪತ್ನಿ ತ್ರಿವೇಣಿ ಎಸ್.ಡಿ.ಎಂ ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆಯಲ್ಲಿ ಕನ್ನಡ ಹಾಗೂ ತುಳು ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ.