ನಾವೂರು ಗ್ರಾಮದ ನಾಗಜೆ ಯಮನಾರವರ ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಹಾನಿ

0

ನಾವೂರು: ಜು.22ರಂದು ಸಂಜೆ ಸುರಿದ ಭಾರಿ ಗಾಳಿ ಮಳೆಗೆ ನಾವೂರು ಗ್ರಾಮದ ನಾಗಜೆ ಯಮನಾ ರವರ ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಮನೆಗೆ ಹಾನಿಯಾದ ಘಟನೆ ನಡೆದಿದೆ.

ಮರ ಬಿದ್ದ ಪರಿಣಾಮ ಮನೆಯ ಹಂಚುಗಳು ಹುಡಿಯಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಮನೆಯವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.ತಾತ್ಕಲಿಕವಾಗಿ ಮನೆಯವರನ್ನು ಮನೆ ಸಮೀಪದ ಶೆಡ್‌ ಗೆ ಸ್ಥಳಾಂತರಿಸಲಾಗಿದೆ.

ನಾವೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಗಣೇಶ್ ಗೌಡ ಹಾಗೂ ಸ್ಥಳೀಯರಿಂದ ತೆರವು ಕಾರ್ಯ ನಡೆಯಿತು.

LEAVE A REPLY

Please enter your comment!
Please enter your name here