ಹೊಸಂಗಡಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಒಕ್ಕೂಟದ ಪದಗ್ರಹಣ, ಸತ್ಯನಾರಾಯಣ ಪೂಜೆ

0

ಪೆರಿಂಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಗುರುವಾಯನಕೆರೆ ವ್ಯಾಪ್ತಿಯ ಹೊಸಂಗಡಿ ವಲಯದ ಹೊಸಂಗಡಿ ಬಡಕೋಡಿ ಒಕ್ಕೂಟದ ಆಶ್ರಯದಲ್ಲಿ ಜರಗುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಸಮಾರಂಭ ಪಡ್ಯರಬೆಟ್ಟು ಸಂತೃಪ್ತಿ ಸಭಾಭವನದಲ್ಲಿ ಜರುಗಿತು.

ಪದ್ಮ ಕ್ಯಾಷು ಫ್ಯಾಕ್ಟರಿ ಮಾಲಕ ವಿಕಾಸ್ ಜೈನ್ ರವರು ಉದ್ಘಾಟನೆ ನೆರವೇರಿಸಿ ಯೋಜನೆಯಿಂದ ಪ್ರತಿ ಮನೆಮನೆಯ ಅಭಿವೃದ್ಧಿಯಾಗಿದೆ ಪರಮಪೂಜ್ಯ ಕಾವಂದರ ದಂಪತಿಗಳ ಆಶಯವಾಗಿದೆ ಎಂದು ನೂತನ ಒಕ್ಕೂಟಕ್ಕೆ ಶುಭ ಹಾರೈಸಿದರು.

ಕೇಂದ್ರ ಕಚೇರಿಯ ಮಾನವ ಸಂಪನ್ಮೂಲ ಯೋಜನಾಧಿಕಾರಿ ಶ್ರೀನಿವಾಸ್ ಪಿ ಯವರು ನಂಬಿಕೆಯ ಆಧಾರದಲ್ಲಿ ಬೆಳೆದು ಬಂದಿರುವ ಗ್ರಾಮ ಅಭಿವೃದ್ಧಿ ಯೋಜನೆಯ ಮೂಲ ಪರಿಕಲ್ಪನೆ ಹಾಗೂ ಜನರ ಜೀವನದಲ್ಲಿ ಆಗಿರುವ ಬದಲಾವಣೆ ಬಗ್ಗೆ ಹಾಗೂ ಧಾರ್ಮಿಕವಾಗಿ ಜನರ ಭಾವನೆಗಳ ಬಗ್ಗೆ ಹೇಳುತ್ತಾ ಹುಟ್ಟು ಹಾಕಿರುವ ಮೂಲದೇಯವನ್ನು ನಾವು ಮರೆಯಬಾರದು ಎಂದು ತಿಳಿಸಿದರು.

ಹೊಸಂಗಡಿ ವಲಯ ಅಧ್ಯಕ್ಷ ಸತೀಶ್ ಮಠ ರವರು 30 ವರ್ಷದ ಹಿಂದಿನ ಜೀವನದ ಪರಿಕಲ್ಪನೆ ಹಾಗೂ ಈಗಿನ ಜೀವನದಲ್ಲಿ ಆಗಿರುವ ಬದಲಾವಣೆಗೆ ಡಾ.ಹೆಗ್ಗಡೆ ಕಾರಣ ಎಂದು ಹೇಳಿದರು.ವೇದಿಕೆಯಲ್ಲಿ ತಾಲೂಕು ಜನಜಾಗೃತಿ ಸದಸ್ಯರಾದ ವಿದ್ಯಾನಂದ ಜೈನ್, ವಿಠ್ಠಲ್ ಸಿ. ಪೂಜಾರಿ, ಪೂಜಾ ಸಮಿತಿ ಅಧ್ಯಕ್ಷ ಸೀನ ಶೆಟ್ಟಿ ಕಿರಿಂಬಿ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here