ಮಡಂತ್ಯಾರು: ಕಥೊಲಿಕ್ ಸಭಾ ಘಟಕ ಮತ್ತು ಮಡಂತ್ಯಾರು ರೋಟರಿ ಕ್ಲಬ್ ನ ಜಂಟಿ ಆಶ್ರಯದಲ್ಲಿ ಹಾವು ನಾವು ಪರಿಸರ ಮಾಹಿತಿ ಕಾರ್ಯಾಗಾರ ಜು.14ರಂದು ಮಡಂತ್ಯಾರು ಚರ್ಚ್ ಹಾಲ್ ನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ಸ್ನೇಕ್ ಕಿರಣ್ ಮಂಗಳೂರು ಇವರು ಉರಗಗಳ ಬಗ್ಗೆ ಪರಿಚಯ, ಅವುಗಳಿಂದ ಪರಿಸರಕ್ಕೆ ಆಗುವ ಉಪಯೋಗ, ಅವುಗಳ ರಕ್ಷಣೆಗೆ ನಮ್ಮ ಕೊಡುಗೆ, ಎಂಬುದರ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಚರ್ಚ್ ಧರ್ಮಗುರುಗಳು ಸ್ಟೇನಿ ಗೋವಿಯಸ್, ದೀಪಕ್ ಡೇಸಾ, ಜೆರೋಮ್ ಡಿ’ಸೋಜಾ, ಪಾಲನಾ ಮಂಡಳಿಯ ಉಪಾಧ್ಯಕ್ಷರು ಜೆರಾಲ್ಡ್ ಮೊರಾಸ್, ಕಾರ್ಯದರ್ಶಿ ನೆಲ್ಸನ್ ಲಸ್ರಾದೊ, ಚರ್ಚಿನ ಸರ್ವ ಆಯೋಗದ ಸಂಚಾಲಕರು ರಿಚರ್ಡ್ ಮೊರಾಸ್, ಚರ್ಚ್ ಕುಟುಂಬದ ಸದಸ್ಯರು ಮತ್ತು ಮಕ್ಕಳು, ಕ.ಸ. ಅಧ್ಯಕ್ಷರು ಆರ್.ಟಿ.ಎನ್. ಸೆಲೆಸ್ಟಿನ್ ಡಿ’ಸೋಜಾ, ಕಾರ್ಯದರ್ಶಿ ಆರ್.ಟಿ.ಎನ್. ಮ್ಯಾಕ್ಸಿಮ್ ಅಲ್ಬುಕರ್ಕ್, ಪದಾಧಿಕಾರಿಗಳು ಸರ್ವ ಸದಸ್ಯರು, ರೋಟರಿ ಅಧ್ಯಕ್ಷರು ಆರ್.ಟಿ.ಎನ್. ನಿತ್ಯಾನಂದ ಬಿ, ಕಾರ್ಯದರ್ಶಿ ಆರ್.ಟಿ.ಎನ್ ತುಳಸೀದಾಸ್ ಪೈ, ಮಾಜಿ ಅಧ್ಯಕ್ಷರು ಆರ್.ಟಿ.ಎನ್. ಕಾಂತಪ್ಪ ಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕ.ಸ.ಪದಾಧಿಕಾರಿ ವಿನ್ಸೆಂಟ್ ಮೊರಾಸ್ ಅರ್ಥಪೂರ್ಣವಾಗಿ ನಡೆಸಿಕೊಟ್ಟರು.