ವಿದ್ಯಾಮಾತಾದ ಮುಕುಟಕ್ಕೆ ಮತ್ತೊಂದು ಗರಿಮೆ- SSC-GD(ಸಶಸ್ತ್ರ ಪಡೆ) ಲಿಖಿತ ಪರೀಕ್ಷೆ ಉತ್ತೀರ್ಣಗೊಂಡ ಇಂಜಿನಿಯರಿಂಗ್ ವಿದ್ಯಾರ್ಥಿನಿ ಲಹರಿ ಕೆ- ರಾಷ್ಟ್ರೀಯ ಮಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ ಗ್ರಾಮೀಣ ಪ್ರತಿಭೆ

0

ಪುತ್ತೂರು: ವಿದ್ಯಾಮಾತಾ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ತರಬೇತಿಯನ್ನು ಪಡೆದು ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಸಿಬ್ಬಂದಿ ನೇಮಕಾತಿ ಆಯೋಗ(SSC) ನಡೆಸಿರುವ ಜನರಲ್ ಡ್ಯೂಟಿ(G D) ಹುದ್ದೆಯ ಲಿಖಿತ ಪರೀಕ್ಷೆಯನ್ನು ಎದುರಿಸಿದ ಅಕಾಡೆಮಿಯ ವಿದ್ಯಾರ್ಥಿನಿ ಲಹರಿ ಕೆ ಅವರು ಉತ್ತೀರ್ಣರಾಗಿ ಸಂಸ್ಥೆಗೆ ಮತ್ತು ಹೆತ್ತವರಿಗೆ ಹಿರಿಮೆಯನ್ನು ತಂದಿದ್ದಾರೆ.

ಮೂಲತಃ ಬಂಟ್ವಾಳ ತಾಲೂಕಿನ ವಿಟ್ಲ ಇಲ್ಲಿನ ಕುಳ ನಿವಾಸಿ, ಸೂರ್ಯನಾರಾಯಣ ಎಚ್ ಆರ್ ಮತ್ತು ಲತಾ ಪಿ ದಂಪತಿಗಳ ಪುತ್ರಿಯಾಗಿರುವ ಈಕೆ, ಪ್ರಸ್ತುತ ಪುತ್ತೂರಿನ ವಾಸ್ತಲ್ಯ ಹೌಸ್ ಕಲ್ಲೇಗ,ನೆಹರು ನಗರದ ನಿವಾಸಿ.ಮಂಗಳೂರಿನ ಕೆನರಾ ಕಾಲೇಜ್ ಇಲ್ಲಿ ಇಂಜಿನಿಯರಿಂಗ್ ಪದವಿ(E/C)ಯನ್ನು ಪಡೆದಿರುತ್ತಾರೆ.

ಆಗಸ್ಟ್ ನಲ್ಲಿ ದೈಹಿಕ ಸದೃಢತಾ ಪರೀಕ್ಷೆ: ಲಹರಿ ಕೆ ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿರುವ ಸಂಸ್ಥೆಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು SSC-GD ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಭ್ಯರ್ಥಿಗಳಿಗೆ ಆಗಸ್ಟ್ ತಿಂಗಳಿನಲ್ಲಿ ದೈಹಿಕ ಸದೃಢತೆಯ ಪರೀಕ್ಷೆಯು ನಡೆಯಲಿದ್ದು, ಇದರ ಸಲುವಾಗಿ ಉಚಿತ ಮೈದಾನ ತರಬೇತಿಯನ್ನು ಅಕಾಡೆಮಿ ನೀಡಲಿದೆ ಎಂದು ಹೇಳಿದ್ದಾರೆ.ಕಳೆದ 2 ವರ್ಷಗಳಲ್ಲಿ 25ಕ್ಕೂ ಅಧಿಕ ಅಭ್ಯರ್ಥಿಗಳು ಅಗ್ನಿಪಥ್ ನೇಮಕಾತಿಯಲ್ಲಿ ಹಾಗೂ ಭಾರತೀಯ ಸೇನೆಯಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಹುದ್ದೆ ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದನ್ನು ಕೂಡ ಇಲ್ಲಿ ಸ್ಮರಿಸಿಕೊಳ್ಳಬಹುದು.

ಎಸ್ ಎಸ್ ಸಿ GD ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಈ ಕೆಳಗಿನ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ: ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (BSF), ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF ), ಸಶಸ್ತ್ರ ಸೀಮಾ ಬಲ್ (SSB), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(CRPF), ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ITBP),ಅಸ್ಸಾಂ ರೈಫಲ್ಸ್(AR)ನರೋಟಿಕ್ಸ್ ಕಂಟ್ರೋಲ್ ಬ್ಯುರೋ(NCB), ಸೆಕ್ರೆಟ್ರಿಯೇಟ್ ಸೆಕ್ಯುರಿಟಿ ಫೋರ್ಸ್(SSF) ನಲ್ಲೂ ಸೇವೆ ಸಲ್ಲಿಸಲು ಅವಕಾಶವಿದೆ.

ಅಕಾಡೆಮಿಯಲ್ಲಿ ವೈಶಿಷ್ಟ್ಯ ಪೂರ್ಣ ತರಬೇತಿ: ಪಿಯು, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಗುಮಾಸ್ತ ಹುದ್ದೆಯಿಂದ ಪ್ರಾರಂಭವಾಗಿ ಐ.ಎ. ಎಸ್ ವರೆಗಿನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಒಂದೇ ಸೂರಿನಲ್ಲಿ ತರಬೇತಿ ನೀಡುತ್ತಿರುವ ಅಕಾಡೆಮಿಯು, 6 ತಿಂಗಳ ಪ್ರಾಥಮಿಕ ಹಂತದ ತರಬೇತಿ ನೀಡಿ 2 ವರ್ಷಗಳ ಕಾಲ ಪ್ರತೀ ವಿದ್ಯಾರ್ಥಿ ಬಗ್ಗೆಯೂ ವಿಶೇಷ ಗಮನ ನೀಡಿ, ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ಎದುರಿಸಲು ಮಾರ್ಗದರ್ಶನ ಕೊಟ್ಟು, ಅವರನ್ನು ಸಂಪೂರ್ಣ ತಯಾರಿಗೊಳಿಸಲಾಗುತ್ತದೆ. ಇಷ್ಟೇಯಲ್ಲದೇ ತರಬೇತಿ ಪಡೆದ ಪ್ರತೀ ವಿದ್ಯಾರ್ಥಿಗೂ ಉಚಿತವಾಗಿ ಕಂಪ್ಯೂಟರ್ ಹಾಗೂ ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡಲಾಗುತ್ತದೆ.ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಅರ್ಜಿ ಸಲ್ಲಿಸುವವರಿಗೆ ಮೈದಾನ ತರಬೇತಿ ನೀಡುವುದರ ಮೂಲಕ ದೈಹಿಕ ಸದೃಢತಾ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಪ್ರತೀ ಅಭ್ಯರ್ಥಿಗಳನ್ನು ಹತ್ತಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅವಕಾಶ ಕಲ್ಪಿಸುವ ಮೂಲಕ ಗುರಿ ತಲುಪುವಂತೆ ಸಾಧ್ಯವಾಗಿಸಲು ವಿದ್ಯಾಮಾತಾ ಅಕಾಡೆಮಿಯ ಅತ್ಯುತ್ತಮ ತರಬೇತುದಾರರನ್ನು ಕೂಡ ಹೊಂದಿದೆ.

ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿ ಪುತ್ತೂರು.ಮೊ. 96204 68869 ಅಥವಾ 9148935808

ಸುಳ್ಯ ಶಾಖೆ 9448527606 ಅಥವಾ ಕಾರ್ಕಳ ಶಾಖೆ 8310484380, 9740564044 ಸಂಪರ್ಕಿಸಬಹುದು.

p>

LEAVE A REPLY

Please enter your comment!
Please enter your name here