ಕನ್ಯಾಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆ ಕನ್ಯಾಡಿ II ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸುವ, ನಾಯಕತ್ವ ಗುಣಗಳನ್ನು ಬೆಳೆಸುವ ಹಿನ್ನೆಲೆಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ಇವಿಎಂ ಬಳಸಿ ಮಾಡಲಾಯಿತು.
ಚುನಾವಣೆ ಅಧಿಸೂಚನೆ, ನಾಮಪತ್ರ ಸಲ್ಲಿಕೆ ಪರಿಶೀಲನೆ, ಚಿಹ್ನೆಗಳ ವಿತರಣೆ ಚುನಾವಣೆ ಪ್ರಚಾರ ಪ್ರಕ್ರಿಯೆಗಳು ನಡೆದು ಚುನಾವಣೆಯ ದಿನ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ಶಿಸ್ತಿನಿಂದ ಬಂದು ತಮ್ಮ ಗುರುತು ಪತ್ರ ತೋರಿಸಿ ಮತ ಚಲಾಯಿಸಿದರು.
ಸಾರ್ವತ್ರಿಕ ಚುನಾವಣೆಯಲ್ಲಿ ಬಳಸುವ ರೀತಿಯಲ್ಲಿ ಇವಿಎಂ ಮಾದರಿಯ ಮೊಬೈಲ್ ಅಪ್ಲಿಕೇಶನ್ ಮೂಲಕ ವಿದ್ಯಾರ್ಥಿಗಳು ಮತ ಚಲಾಯಿಸಿ ವಿದ್ಯಾರ್ಥಿಗಳ ಬೆರಳಿಗೆ ಇಂಕ್ ಗುರುತು ಹಾಕಲಾಯಿತು.
ಕೊನೆಯಲ್ಲಿ ಮತ ಎಣಿಕೆಯನ್ನು ಸಹ ಕ್ರಮಬದ್ಧವಾಗಿ ನಡೆಸಲಾಯಿತು.
ಶಾಲಾ ವಿದ್ಯಾರ್ಥಿ ನಾಯಕನಾಗಿ ಸುಜಿತ್, ಉಪನಾಯಕಿಯಾಗಿ ಅನನ್ಯ ಆಯ್ಕೆ ಆಗಿದ್ದಾರೆ.
p>