ಧರ್ಮಸ್ಥಳ: ಮೆಸ್ಕಾಂ ನಿಗಮ ಧರ್ಮಸ್ಥಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಧರ್ಮಸ್ಥಳ ಇದರ ಸಹಯೋಗದೊಂದಿಗೆ ಪ್ರಾಕೃತಿಕ ವಿಕೋಪಗಳು ಮತ್ತು ಸಾಂಕ್ರಾಮಿಕ ರೋಗಗಳಿಂದ ಸುರಕ್ಷತಾ ಜಾಗೃತಿ ಕಾರ್ಯಕ್ರಮವು ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮೆಸ್ಕಾಂ ನಿಗಮ ಧರ್ಮಸ್ಥಳದ ಅಸಿಸ್ಟೆಂಟ್ ಎಂಜಿನಿಯರ್ ಸುಹಾಸ್ ವಿದ್ಯುತ್ ಶಕ್ತಿಯಿಂದ ಆಗುವ ಅವಘಡಗಳು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಯಪಡಿಸಿದರು.
ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಮಂಜು.ಎಚ್ಆರ್ ಅವರು ಡೆಂಗ್ಯೂ ಜ್ವರದ ನಿರ್ಮೂಲನೆಯ ಬಗ್ಗೆ ನಾವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಮೆಸ್ಕಾಂ ನಿಗಮ ಧರ್ಮಸ್ಥಳದ ಅಧಿಕಾರಿ ಅಶೋಕ್ l ಉಪಸಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಜೈನ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಲಿಂಗಪ್ಪ ಗೌಡ ಪಿ.ಎನ್. ಸ್ವಾಗತಿಸಿ, ಯುವರಾಜ ರವರು ನಿರೂಪಿಸಿ, ಶಶಿಧರ್ ಧನ್ಯವಾದ ನೀಡಿದರು. ಶಾಲಾ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.