ಕಳಿಯ: ಪ್ರಾ.ಕೃ.ಪ.ಸ.ಸಂಘದ ಮಹಾಸಭೆ- ಸಿಇಒ ಸತ್ಯಂಶಕರ ಕೆ.ಜಿ.ಗೆ ಬೀಳ್ಕೊಡುಗೆ

0

ಗೇರುಕಟ್ಟೆ: ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಿಇಒ ಸತ್ಯಂಶಕರ ಕೆ.ಜಿ.ರವರಿಗೆ ಬೀಳ್ಕೊಡುಗೆ ಸಮಾರಂಭ ಜೂ.30ರಂದು ಕಳಿಯ ಗೇರುಕಟ್ಟೆ ಸಹಕಾರಿ ಸಭಾ-ಭವನದಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಸಂಘ‌ದ ಅಧ್ಯಕ್ಷ ವಸಂತ ಮಜಲು ಮಾತನಾಡಿ, ಸಂಘದ ಅಭಿವೃದ್ಧಿಗೆ ಸದಸ್ಯರು ಉತ್ತಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ಬಾರಿ 20% ಡಿವಿಡೆಂಡ್ ಘೋಷಿಸಿದರು. ಸಂಘ ಸ್ಥಾಪನೆಯಾಗಿ ಪ್ರಥಮ ಬಾರಿಗೆ 1ಕೊಟಿ 37 ಲಕ್ಷ ರೂಪಾಯಿ ಲಾಭ ಗಳಿಸಿದೆ ಎಂದರು.

ಗೌರವಾರ್ಪಣೆ ಸ್ವೀಕರಿಸಿದ ಸಿಇಒ ಸತ್ಯಂಶಕರ ಕೆ‌.ಜಿ. ಮಾತನಾಡಿ, ಪ್ರೀತಿ ವಿಶ್ವಾಸ ನೀಡಿ ಸೇವೆಯಲ್ಲಿ ಸಹಕರಿಸಿದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಸದಸ್ಯರಿಗೆ ಕೃತಜ್ಞತೆಗಳು. ನಿಮ್ಮ ಪ್ರೀತಿ ವಿಶ್ವಾಸ ನಿವೃತ್ತಿ ಜೀವನದಲ್ಲಿಯೂ ಇರಲಿ ಎಂದು ಭಾವುಕರಾದರು.

ಗೌರವಾರ್ಪಣೆ: ಸೇವೆಯಿಂದ ನಿವೃತ್ತಿ ಯಾಗುತ್ತಿರುವ ಸಂಘದ ಸಿಇಒ ರಸತ್ಯಂಶಕರ ಕೆ.ಜಿ. ಅವರನ್ನು ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದ ಸದಸ್ಯರ ಒಟ್ಟು 39 ಮಂದಿ ಮಕ್ಕಳನ್ನು ಗೌರವಿಸಲಾಯಿತು. ದಂತ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ 4ನೇ ರಾಂಕ್ ಗಳಿಸಿದ ಗೇರುಕಟ್ಟೆಯ ಡಾ ಅನುಧೀಕ್ಷಾ ಎಸ್.ಆರ್ ರವರನ್ನು ಸನ್ಮಾನಿಸಲಾಯಿತು. ಸಂಘದಲ್ಲಿ ಅತೀ ಹೆಚ್ಚು ವ್ಯವಹಾರ ಮಾಡಿದ ಕಳಿಯ, ಓಡಿಲ್ನಾಳ ಮತ್ತು ನ್ಯಾಯತರ್ಪು ಗ್ರಾಮದ ಸದಸ್ಯ ಕೃಷಿಕರಾದ ಹೇಮಂತ್, ಮಾಥ್ಯು ಫಿಲಿಪ್ಸ್, ಅರವಿಂದ ಕೆ, ಅಲಿಯಾಮ್ಮ ,ಆನಂದ ಗೌಡ ಹಾಗೂ ಸರಿನಾ ಮಾಲಿನ ಡಿಸೋಜಾ ಅವರಿಗೆ ಕೃಷಿ ಸಲಕರಣೆ ನೀಡಿ ಗೌರವಿಸಲಾಯಿತು.

ನಿದೇರ್ಶಕರುಗಳಾದ ಯಂ. ಹರಿದಾಸ ಪಡಂತ್ತಾಯ ಮಲವೂರು, ಶೇಖರ ನಾಯ್ಕ್ ಸ್ಪೂರ್ತಿ ಗೇರುಕಟ್ಟೆ, ಚಂದ್ರವಾತಿ ಕಟ್ಟದಬೈಲ್, ಮಮತಾ ನಾಳ, ಗೋಪಾಲ ನಾಯ್ಕ್ ಬನ, ಕುಶಾಲಪ್ಪ ಗೌಡ ಕಲಾಯಿದೊಟ್ಟು, ಬಾಲಕೃಷ್ಣ ಗೌಡ ಬಿರ್ಮೊಟ್ಟು, ಉದಿತ್ ಕುಮಾರ್ ಬರಾಯ, ಲೋಕೇಶ್ ಎನ್ ನಾಳ, ಕೇಶವ ಪೂಜಾರಿ , ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here