ಉಜಿರೆ: ಉಜಿರೆಯ ಶ್ರೀ ದುರ್ಗಾ ಕಾಂಪ್ಲೆಕ್ಸ್ ನೆದುರಿನ ಬೃಹತ್ ಮರ ಏಕಾಏಕಿ ಧರೆಗುರುಳಿದ ಪರಿಣಾಮ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ರೀಕ್ಷಾ, ನಿಲ್ಲಿಸಿದ್ದ ಕಾರು ಮತ್ತು ಓಮ್ನಿ ಜಖಂಗೊಂಡ ಘಟನೆ ಜೂ.24ರಂದು ನಡೆದಿದೆ. ಇದರಲ್ಲಿ ಆಟೋ ಚಾಲಕ ಮತ್ತು ಪ್ರಯಾಣಿಕ ಗಂಭೀರಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನಲೆಯಲ್ಲಿ ಸ್ಥಳೀಯರು,ಆಟೋ ಚಾಲಕರು ಮತ್ತು ಸಾರ್ವಜನಿಕರು ಗಾಯಗೊಂಡವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು.
ಆದರೆ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಕಾನೂನು ಬಾಹಿರವಾಗಿ ಅಕ್ರಮವಾಗಿ ಜನರನ್ನು ಗುಂಪು ಸೇರಿಸಿ ಸಾರ್ವಜನಿಕ ರಸ್ತೆಯಲ್ಲಿ ಕೂತು ವಾಹನ ಸುಗಮ ಸಂಚಾರಕ್ಕೆ ತಡೆಯೊಡ್ಡಿ ಜನಸಂಚಾರಕ್ಕೆ ಅಡ್ಡಿ ಉಂಟುಮಾಡಿದ್ದಾರೆ ಎಂದು ಆರೋಪಿಸಿ 15 ಜನರು ಮತ್ತು ಇತರರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ರಾಮಚಂದ್ರ ರವರು ಜೂ. 24 ರಂದು ರೌಂಡ್ಸ್ ಕರ್ತವ್ಯದಲ್ಲಿದ್ದು ಚಾರ್ಮಾಡಿಯಿಂದ ಬೆಳ್ತಂಗಡಿ ಕಡೆಗೆ ಆಗಮಿಸುತ್ತಿದ್ದರು. ಈ ವೇಳೆ ಉಜಿರೆ ಪೇಟೆಯ ಮಾವಂತೂರು ಲಾಡ್ಜ್ ಎದುರುಗಡೆ ಕೆಲವು ಜನರು ಸೇರಿ ರಸ್ತೆ ತಡೆ ನಡೆಸಿ ಅಂದರೆ ಸಾರ್ವಜನಿಕ ಡಾಮಾರು ರಸ್ತೆಯ ಮಧ್ಯೆಕೂತು ವಾಹನ ಸಂಚಾರ ಹಾಗೂ ಜನಸಂಚಾರಕ್ಕೆ ತಡೆ ಒಡ್ಡುತ್ತಿದ್ದ ಸಮಯ ಸ್ಥಳಕ್ಕೆ ಹೋಗಿ ನೋಡಿ ನೋಡಿ ಪರಿಚಯ ಇರುವ ಪ್ರವೀಣ್ ಫೆರ್ನಾಂಡಿಸ್, ರಮೇಶ ಗಾಂಧಿನಗರ, ಶೀನಗಾಂಧಿನಗರ, ಇಕ್ಷಾಲ್ ಅತ್ತಾಜೆ, ಸಂತೋಷ್ ಉಜಿರೆ, ಉಮೇಶ ಆಚಾರ್ಯ, ಅಣು ಗಾಂಧಿನಗರ, ಸುಜನ್ ಪಜಿರಡ್ಕ ಬಾಬು ಗಾಂಧಿನಗರ, ಗಿರೀಶ ಪೆರ್ಲ, ಗೋಪಾಲ ಗಾಂಧಿನಗರ, ಗಣೇಶ ಬಡೆಕೊಟ್ಟು, ಉಮರ್ ಟಿ.ಬಿಕ್ರಾಸ್, ರಂಜನ್ ಗಾಂಧಿನಗರ ಮತ್ತು ಇತರರು ಸ್ಥಳದಲ್ಲಿ ಸೇರಿದ್ದು ವಿಚಾರಿಸಲಾಗಿ, ಮಾವಂತೂರುಲಾಡ್ಜ್ ಎದುರು ಪಾರ್ಕ್ ಮಾಡಿದ್ದ ಅಟೋರಿಕ್ಷಾ ಒಂದರ ಮೇಲೆ ಮರಬಿದ್ದು ಅಟೋರಿಕ್ಷಾ ಜಖಂ ಆದ ವಿಚಾರದಲ್ಲಿ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಕಾನೂನು ಬಾಹಿರವಾಗಿ ಅಕ್ರಮವಾಗಿ ಜನರನ್ನು ಗುಂಪು ಸೇರಿಸಿ ಸಾರ್ವಜನಿಕ ರಸ್ತೆಯಲ್ಲಿ ಕೂತು ವಾಹನ ಸುಗಮ ಸಂಚಾರಕ್ಕೆ ತಡೆಒಡ್ಡಿ ಜನಸಂಚಾರಕ್ಕೆ ಅಡ್ಡಿ ಉಂಟುಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ.