ಬೆಳ್ತಂಗಡಿ: ಹಳೆಕೋಟೆ ಸಾಯಿ ಮಂದಿರದಲ್ಲಿ ಗಮಕವಾಚನ

0

ಬೆಳ್ತಂಗಡಿ: ಕರ್ನಾಟಕದ ಪರಿಷತ್ತು ವತಿಯಿಂದ ಮನೆ ಮನೆ ಗಮಕ ಕಾರ್ಯಕ್ರಮದಲ್ಲಿ ಜೂನ್ 20ರಂದು ಬೆಳ್ತಂಗಡಿ ಹಳೆಕೋಟೆ ಶಿರಡಿ ಸಾಯಿ ಸತ್ಯ ಸಾಯಿಬಾಬಾ ಕ್ಷೇತ್ರದಲ್ಲಿ ಜಯಶ್ರೀ ಹಾಗೂ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ ಅವರಿಂದ ವಾಲ್ಮೀಕಿ ರಾಮಾಯಣದ ಸುಂದರಕಾಂಡದ ಗಮಕ ವಾಚನ ವ್ಯಾಖ್ಯಾನವು ನಡೆಯಿತು.

ದೀಪ ಬೆಳಗಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದ ಜಿಲ್ಲಾಧ್ಯಕ್ಷ ಕಲ್ಲೂರಾಯರು ಗಮಕ ಕಳೆಗಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೇಳಿ ಎಲ್ಲಾ ಸಾಹಿತ್ಯ, ಕಲಾಭಿಮಾನಿಗಳು ಮನೆಮನೆ ಗಮಕ ಕಾರ್ಯಕ್ರಮಕ್ಕೆ ಪ್ರೋತ್ಸಾಹವನ್ನು ನೀಡಬೇಕು ಎಂದು ಹೇಳಿದರು. ಸಾಯಿ ಕ್ಷೇತ್ರದ ಅಧ್ಯಕ್ಷ ಸಿ.ಎಚ್ ಪ್ರಭಾಕರ್ ಅವರು ಸ್ವಾಗತಿಸಿ, ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಭಟ್ ಬಳಂಜ ಅವರು ಧನ್ಯವಾದವನ್ನು ನೀಡಿದರು.

ಕಾರ್ಯದರ್ಶಿ ಮೇಧಾ ಅಶೋಕ್ ಕುಮಾರ್, ಉಪನ್ಯಾಸಕರುಗಳಾದ ಪ್ರೊಫೆಸರ್ ಗಣಪತಿ ಭಟ್ ಕುಳಮರ್ವ, ಸುವರ್ಣ ಕುಮಾರಿ, ವಸಂತಿ, ಕಿರಣ್ ಶೆಟ್ಟಿ, ಲತಾ ಪ್ರಭಾಕರ್ ಇನ್ನು ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಸಿ.ಎಚ್ ಪ್ರಭಾಕರ್ ಮತ್ತು ಕುಟುಂಬದವರು ಮಾಡಿದ್ದರು.ಗುರುವಾರ ಆದ ಕಾರಣ ಹಲವಾರು ಸಾಯಿ ಭಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

p>

LEAVE A REPLY

Please enter your comment!
Please enter your name here