ರೆಖ್ಯ: ಗ್ರಾಮದ ಕೊಳೆಚ್ಚಾವು ನಿವಾಸಿ ಆಶಾ ಕಾರ್ಯಕರ್ತೆ ಕಮಲಾಕ್ಷಿ ಎಂಬವರ ಮನೆಯ ದನದ ಕೊಟ್ಟಿಗೆಗೆ ಮರಬಿದ್ದು ಕೊಟ್ಟಿಗೆ ಸಂಪೂರ್ಣ ನಾಶಗೊಂಡಿದ್ದು ಹಸುಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಸಿನಮಕ್ಕಿ, ಶಿಶಿಲ ವಲಯದ ಶೌರ್ಯ ವಿಪತ್ತು ತಂಡದ ಸದಸ್ಯರು ಬಿದ್ದಿರುವ ಮರವನ್ನು ತೆರವುಗೊಳಿಸಿದರು.
ಹತ್ಯಡ್ಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ರವರು ಸಂಘದ ವತಿಯಿಂದ ಕೊಟ್ಟಿಗೆಗೆ ಸಿಮೆಂಟ್ ಶೀಟ್ ಹಾಗೂ ಇನ್ನಿತರ ಅಗತ್ಯ ಸಮಾಗ್ರಿಗಳನ್ನು ಭರಿಸಿ ನೆರವಾದರು.
ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ನಿರ್ದೇಶಕ ಜೈವಂತ ಪಟಗಾರ, ವಲಯ ಮೇಲ್ವಿಚಾರಕಿ ಶಶಿಕಲಾ, ಘಟಕ ಪ್ರತಿನಿಧಿ ಆನಂದ ನಾಯ್ಕ್, ಸಂಯೋಜಕಿ ರಶ್ಮಿತಾ ಇವರ ಮಾರ್ಗ ದರ್ಶನದಂತೆ, ಶೌರ್ಯ ವಿಪತ್ತು ತಂಡದ ಸದಸ್ಯರಾದ ಅವಿನಾಶ್ ಭಿಡೆ, ಚೇತನ್ ಕೊಳೆಚ್ಚಾವು, ರಮೇಶ್ ಬೈರಕಟ್ಟ, ನಿತಿನ್ ಬೈರಕಟ್ಟ,ಕಿರಣ್ ಶಿಶಿಲ, ಹರೀಶ್ ವಳಗುಡ್ಡೆ, ಮಾಧವ ಗೌಡ ಶಿಶಿಲ ಕಾರ್ಯಾಚರಣೆಯಲ್ಲಿ ಸಹಕರಿಸಿದರು.
p>