ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಮಹಾಸಭೆ

0

ಮಂಜೊಟ್ಟಿ: ರಝಾ ಗಾರ್ಡನ್ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯು ಜೂನ್ 22ರಂದು ಶಾಲಾ ನೂತನ ಸಭಾಂಗಣದಲ್ಲಿ ಜರುಗಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಜಾಕಿನ್ ಬಿನ್ ಇವರ ಮಾರ್ಗದರ್ಶನದಲ್ಲಿ ನಡೆದ ಈ ಸಭೆಯಲ್ಲಿ ಶಾಲಾ ಅರೇಬಿಕ್ ಶಿಕ್ಷಣ ವಿಭಾಗದ ಮುಖ್ಯೋಪಾಧ್ಯಾಯ ಅಬ್ದುಲ್ ರಝಕ್ ಇಮ್ದಾದಿ ಮತ್ತು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಹಾಯಕ ಮುಖ್ಯೋಪಾಧ್ಯಾಯ ಸುಂದರ್ ನಾಯ್ಕ್ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯನಿ ಜಾಕಿನ್ ಬಿನ್ ಇವರು ಅತಿಥಿಗಳನ್ನು ಹಾಗೂ ಪೋಷಕರಗಳನ್ನು ಸ್ವಾಗತಿಸಿದರು ಹಾಗೂ 2024-25ನೆಯ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಹಮ್ಮಿಕೊಳ್ಳಲಾಗುವ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ನೀಡಲಾಯಿತು. ಹಾಗೂ ಪೋಷಕರುಗಳು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಿಕ್ಷಕರುಗಳೊಂದಿಗೆ ಕೈಜೋಡಿಸುವುದರ ಜೊತೆಗೆ ತಾವು ಶ್ರಮಿಸುವುದಾಗಿ ತಿಳಿಸಿದರು.

ಅರೇಬಿಕ್ ಶಿಕ್ಷಣ ವಿಭಾಗದ ಮುಖ್ಯೋಪಾಧ್ಯಾಯರು ತಮ್ಮ ಮದರಸ ಶಿಕ್ಷಣದ ಬಗ್ಗೆ ಪೋಷಕರೊಂದಿಗೆ ಮಾಹಿತಿಯನ್ನು ಹಂಚಿಕೊಡರು.

LEAVE A REPLY

Please enter your comment!
Please enter your name here