ಬೆಳ್ತಂಗಡಿ: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಸಂಬಂಧ ರಾಜ್ಯ ಸರಕಾರದ ವಿರುದ್ಧ ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ಸರಕಾರ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಜೂ.20 ರಂದು ಬೆಳ್ತಂಗಡಿ ಮೂರು ಮಾರ್ಗದ ಬಳಿ ಪ್ರತಿಭಟನೆ ನಡೆಯಿತು.ಇನ್ನೂ ಈ ಸಂಧರ್ಭದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಮಾತನಾಡಿ ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ಇವತ್ತು ಸಂಕೇತಿಕವಾಗಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದೇವೆ.ಜನರಿಗೆ ಭರವಸೆಯನ್ನು ಕೊಡುತ್ತಾ ಸುಬ್ರಧ್ರ ಸರಕಾರ ಮಾಡುತ್ತೇವೆ ಎಂದು ಭರವಸೆಯನ್ನು ಸಂಪೂರ್ಣ ಮರೆತು.ಬಡವರ ಬೆನ್ನ ಮೇಲೆ ಭರೆಯನ್ನು ಹಾಕುವ ಕಾರ್ಯವನ್ನು ರಾಜ್ಯ ಸರರ್ಕಾರ ಮಾಡುತ್ತಿದೆ.ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುವ ಮೂಲಕ ಗ್ರಾಹಕರ ಅಥವಾ ಜನ ಸಾಮ್ಯಾನರಿಗೆ ತೊಂದರೆಯಾಗಿದೆ.ಹಾಗಾಗಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಕೈಗೊಂಡಿದ್ದೇವೆ.ಪೆಟ್ರೋಲ್ ಡಿಸೇಲ್ ಬೆಲೆ ಕಡೆಮೆ ಮಾಡುವರೆಗೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಹೇಳಿದರು.
ಇನ್ನೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೊಟ್ಯಾನ್ ಮಾತನಾಡಿ ಇವತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜನರಿಗೆ ಬೇರೆ ಬೇರೆ ರೀತಿಯ ಅಮಿಷ ಒಡ್ಡಿ ಬಿಟ್ಟಿ ಭಾಗ್ಯಗಳನ್ನು ಕೊಡುವಂತಹ ಒಂದು ಅಶ್ವಾಸನೆಯನ್ನು ಇಟ್ಟು ಸರಕಾರ ಅಧಿಕಾರಕ್ಕೆ ಬಂದಿದೆ.ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಇವತ್ತು ಇಡೀ ರಾಜ್ಯದಲ್ಲಿ ಬೆಲೆ ಏರಿಕೆಯ ವ್ಯವಸ್ಥೆಯನ್ನು ಅದೇ ರೀತ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡುವ ಮುಖಂತರ ಜನಸಾಮಾನ್ಯರಿಗೆ ಒಂದು ಪೆಟ್ಟು ಬೀರುವ ವ್ಯವಸ್ಥೆಯನ್ನು ಸರಕಾರ ಮಾಡಿದೆ.ರಾಜ್ಯ ಸರಕಾರಕ್ಕೆ ಒಂದು ಎಚ್ಚರಿಕೆಯನ್ನು ಕೊಡುತ್ತೇವೆ ನೀವು ಪೆಟ್ರೋಲ್, ಡಿಸೇಲ್ ಬೆಲೆಯನ್ನುಕಡಿಮೆ ಮಾಡದಿದ್ದಾರಿ ಇವತ್ತು ಸಂಕೇತಿಕವಾಗಿ ರಸ್ತೆ ತಡೆ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ನಮ್ಮ ಉಗ್ರವಾದ ಹೋರಾಟವನ್ನು ಮಾಡುವ ಮೂಲಕ ನೀವು ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡುವ ತನಕ ನಮ್ಮ ಹೋರಾಟ ಜನಸಾಮಾನ್ಯರ ಒಟ್ಟಿಗೆ ಇದ್ದುಕೊಂಡು ಈ ಹೋರಾಟವನ್ನು ಭಾರತೀಯ ಜನತಾ ಪಾರ್ಟಿ ಕೈಗೊಂಡಿದೆ.
ಖಂಡಿತವಾಗಿಯೂ ಇದನ್ನು ನಿಲ್ಲುಸುವುದಿಲ್ಲ ಯಾವತ್ತು ಇಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡುತ್ತಿರೋ ಅವತ್ತಿನ ತನಕ ಹೋರಾಟವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತೇವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಹೇಳಿದರು.
ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಮಂಡಲ ಪ್ರದಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ ಮತ್ತು ಜಯಾನಂದ ಗೌಡ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೊರಗಪ್ಪ ಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೊರಗಪ್ಪ ನಾಯ್ಕ, ಜಿಲ್ಲಾ ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಪಟ್ಟಣ ಪಂಚಾಯಿತಿ ಸದಸ್ಯರಾದ ಶರತ್, ಲಾಯಿಲ ಪಂಚಾಯತಿ ಸದಸ್ಯರಾದ ಗಣೇಶ್, ವೇಣೂರು ಸಿಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ ಬಂದಾರು, ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಖಂಡಿಗ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವೇದಾವತಿ, ಪ್ರಮುಖರಾದ ಈಶ್ವರ ಭೈರ, ಲಿಂಗಪ್ಪ ನಾಯ್ಕ, ಪ್ರಮೋದ್ ಗೌಡ ದಿಡುಪೆ, ಪ್ರಭಾಕರ್ ಸವಣಾಲು, ಸಂತೋಷ್ ಕುಮಾರ್ ಜೈನ್, ಸದಾನಂದ ಪೂಜಾರಿ ಅಳದಂಗಡಿ ಉಪಸ್ಥಿತರಿದ್ದರು.