ಬೆಳ್ತಂಗಡಿ: ಜಿಲ್ಲಾ ವೈದ್ಯಕೀಯ ಮಂಡಳಿಯೊಂದಿಗೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ತಾಲೂಕಿನ ವಿಕಲಚೇತನರ ಗುರುತಿನ ಚೀಟಿಯ ನವೀಕರಣ ಹಾಗೂ ಹೊಸ ವಿಕಲಚೇತನರ ಗುರುತಿಸುವಿಕೆಯ ಶಿಬಿರವನ್ನು ನಡೆಸಲಾಯಿತು.
ಶಿಬಿರದ ಮುಂದಾಳತ್ವವನ್ನು ತಾಲೂಕು ವಿಕಲಚೇತನರ ಮೇಲ್ವಿಚಾರಕ ಜೋನ್ ಬ್ಯಾಪಿಸ್ಟ್ ರವರ ಮುಂದಾಳತ್ವದಲ್ಲಿ ನಡೆಯಿತು.
ಶಿಬಿರ ನಡೆಸಲು ಸಹಕಾರ ನೀಡಿದ ವಿವಿಧ ಗ್ರಾಮ ಪಂಚಾಯತ್ ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಇದ್ದುಕೊಂಡು ಸಹಕಾರ ನೀಡಿ ತಾಲೂಕಿನ ಅನೇಕ ವಿಕಲಚೇತನರಿಗೆ ಬುದ್ಧಿಮಾಂದ್ಯ ಮತ್ತು ಮಾನಸಿಕ ವಿಕಲಚೇತನರಿಗೆ ಗುರುತಿನ ಚೀಟಿ ನೀಡಿ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪಡೆದುಕೊಳ್ಳಲು ಯಶಸ್ವಿಯಾಯಿತು.
p>