

ನಾರಾವಿ: ಸಂತ ಅಂತೋನಿ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಜೂನ್ 15ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ವಂ.ಡಾ.ಆಲ್ವಿನ್ ಸೆರಾವೋ ನಾಯಕತ್ವ ಎಂದರೆ ಜವಾಬ್ಧಾರಿ.ಎಲ್ಲರೊಂದಿಗೆ ಸೇರಿ ಜವಾಬ್ಧಾರಿಯನ್ನು ನಿರ್ವಹಿಸುವುದು ಸವಾಲಿನ ಕೆಲಸ. ನಾಯಕನಾದವನಿಗೆ ನಾಯಕತ್ವದ ಅರಿವಿರಬೇಕು ಎಂದರು.
ವೇದಿಕೆಯಲ್ಲಿ ಸಂತ ಅಂತೋನಿ ಪದವಿ ಕಾಲೇಜಿನ ಉಪಪ್ರಾಂಶುಪಾಲ ಸಂತೋಷ್ ಸಲ್ಡಾನ, ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ರಿಚರ್ಡ್ ಮೋರಸ್, ವಿದ್ಯಾರ್ಥಿ ಸಂಘದ ಸಂಯೋಜಕಿ ಜ್ಯೋತಿ ಹೆಗ್ಡೆ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ನಾಯಕನಾಗಿ ಆಯ್ಕೆಯಾದ ಕು.ಜಿತೇಶ್, ಉಪನಾಯಕಿ ಅಶ್ಮಿ ಸಜಿ, ಕಾರ್ಯದರ್ಶಿ ರಿಯಾನ ಡಿ’ಸೋಜ ಹಾಗೂ ವಿವಿಧ ಸಂಘದ ಪದಾಧಿಕಾರಿಗಳಿಗೆ ಪ್ರಾಂಶುಪಾಲರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಜ್ಯೋತಿ ಹೆಗ್ಡೆ ಎಲ್ಲರನ್ನು ಸ್ವಾಗತಿಸಿ, ಸಂತೋಷ್ ಸಲ್ಡಾನ ವಂದನಾರ್ಪಣೆಗೈದರು ಹಾಗೂ ಹಿಂದಿ ಭಾಷಾ ಉಪನ್ಯಾಸಕಿ ಛಾಯಾ ತುಳುಪುಳೆ ಕಾರ್ಯಕ್ರಮವನ್ನು ನಿರೂಪಿಸಿದರು.