ವೇಣೂರು: ಬಕ್ರೀದ್ ಹಬ್ಬ ನಿಮಿತ್ತ ವೇಣೂರು ಆರಕ್ಷಕ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.
ವೇಣೂರು ಆರಕ್ಷಕ ಠಾಣಾ ಉಪ ನಿರೀಕ್ಷಕ ಶೈಲಾ ಮುರ್ಗೊಡ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿ ಅಧ್ಯಕ್ಷ, ಕಾರ್ಯದರ್ಶಿಗಳ ಸಭೆಯನ್ನುದ್ದೇಶಿ ಮಾತಾಡಿ ಶಾಂತಿಯಿಂದ ಹಬ್ಬವನ್ನು ಆಚರಿಸಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸುವಲ್ಲಿ ಸಹಕರಿಸುವಂತೆ ಕರೆ ನೀಡಿದರು.
ಸೈಬರ್ ಸ್ಕ್ಯಾಮ್ ನ ಬಗ್ಗೆ ಮಾಹಿತಿ, ಅಪರಿಚಿತ ಅನುಮಾನಸ್ಪದ ವ್ಯಕ್ತಿ ಮತ್ತು ವಾಹನ ಬಗ್ಗೆ ಠಾಣಾ ಪೊಲೀಸ್ ಸಿಬಂದಿ ಅಥವಾ ತನಗೆ ನೇರವಾಗಿ ದೂರವಾಣಿ ಮೂಲಕ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಪಡ್ಡಂದಡ್ಕ, ಕಾಶಿಪಟ್ಣ,ಅಂಗರಕರಿಯ, ಪುಲಾಬೆ, ವೇಣೂರು, ಕುಂಡದಬೆಟ್ಟು, ನಡ್ತಿಕಲ್ಲು, ಪಿಲ್ಯ, ಮರೋಡಿ, ಉಳ್ತುರು, ಪ್ರದೇಶಗಳ ಮಸೀದಿ ಸಮಿತಿ ಮುಖ್ಯಸ್ಥರುಗಳಾದ ಇಸ್ಮಾಯಿಲ್ ಕೆ.ಎಂ ಪೆರಿಂಜೆ, ರಫೀಕ್ ಪಡ್ಡ, ಅಲಿಯಬ್ಬ ಪುಲಬೆ, ಜಕ್ರಿ ಮೂಡುಕೋಡಿ, ನಜೀಮ್ ಆಂಗರಕರಿಯ, ಅಬಿದ್, ಅಶ್ರಫ್ ಶಾಂತಿನಗರ, ಸಲಾಂ ಮರೋಡಿ, ಪುತ್ತುಮೋನು ಕಾಶಿಪಟ್ಣ, ಅಬ್ಬಾಸ್ ಹಾಜಿ, ಅಬ್ಬಾಸ್ ಬಿ.ಕೆ. ಭಾಗವಹಿಸಿದ್ದರು.
ಎಎಸ್ ಐ ಲೋಕೇಶ್, ಹೆಡ್ ಕಾನ್ಸ್ಟೆಬಲ್ ರವೀಂದ್ರ, ರೈಟರ್ ಪ್ರಶಾಂತ್, ಕಾನ್ಸ್ಟೆಬಲ್ ಶ್ರೀನಿವಾಸ್, ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.