ಉಜಿರೆ: ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಸದಸ್ಯ ಕೃಷ್ಣಪ್ಪ ನಾಯ್ಕ ದೊಂಪದಪಲ್ಕೆ ಉಜಿರೆ ಇವರಿಗೆ ವಾಹನ ಅಪಘಾತವಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮತ್ತು ಇನ್ನೋರ್ವ ಸದಸ್ಯ ಯಶೋಧರ ಗೌಡ ಕಿರಿಯಾಡಿ ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಇಬ್ಬರು ಸದಸ್ಯರಿಗೆ ಆರ್ಥಿಕ ಸಂಕಷ್ಟದಲ್ಲಿ ಇರುವುದನ್ನು ಮನಗಂಡು ಭಜನಾ ಮಂಡಳಿಯ ವತಿಯಿಂದ 10,000/- ಮತ್ತು ಸಹೃದಯ ದಾನಿಗಳು ಸ್ವ ಇಚ್ಛೆಯಿಂದ ನೀಡಿದ ದೇಣಿಗೆ 50,000/-ವನ್ನು ತಲಾ ಒಬ್ಬರಿಗೆ ರೂ.30,000/-ದಂತೆ ಒಟ್ಟು 60,000/-ವನ್ನು ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಕೃಷ್ಣಮೂರ್ತಿ ಹೊಳ್ಳ ಕಿರಿಯಾಡಿ, ರವಿಚಂದ್ರ ಚಕ್ಕಿತ್ತಾಯ ಆರ್.ಎಂ ಉಜಿರೆ ಇವರ ಮೂಲಕ ಹಸ್ತಾಂತರಿಸಲಾಯಿತು.

ಈ ಸಂದರ್ಭ ಭಜನಾ ಮಂಡಳಿ ಅಧ್ಯಕ್ಷ ವಿಠಲ ನಾಯ್ಕ, ಉಪಾಧ್ಯಕ್ಷ ಶ್ರೀಧರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಿರೀಶ್, ಕಾರ್ಯದರ್ಶಿ ಶೈಲೇಶ್ ಧರಣಿ, ಕೋಶಾಧಿಕಾರಿ ರಮೇಶ್ ಕಿರಿಯಾಡಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.