ಬೆಳ್ತಂಗಡಿ: ಹಳೆಕೋಟೆ ಪೆಟ್ರೋಲ್ ಪಂಪು ಬಳಿ ಟಿಪ್ಪರ್ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ- ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಮೃತ್ಯು

0

ಬೆಳ್ತಂಗಡಿ: ಬೆಳ್ತಂಗಡಿ ಹಳೆಕೋಟೆ ಸಮೀಪ ಪೆಟ್ರೋಲ್ ಪಂಪು ಬಳಿ ಟಿಪ್ಪರ್ ಹಾಗೂ ಬೈಕ್‌ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಜೂ.1ರಂದು ಮಧ್ಯಾಹ್ನ ನಡೆದಿದೆ.

ಬೈಕ್‌ ಸವಾರ ಬೆಳ್ತಂಗಡಿಯಿಂದ ಗುರುವಾಯನಕೆರೆ ಕಡೆ ಹೋಗುತ್ತಿದ್ದು ಟಿಪ್ಪರ್ ಸವಾರ ಟಿಪ್ಪರ್ ರಿವರ್ಸ್ ತೆಗೆಯುವ ಸಂದರ್ಭ ಈ ಘಟನೆ ನಡೆದಿದೆ.

ಬೈಕ್ ಟಿಪ್ಪರ್ ನ ಟಯರ್ನ ಅಡಿಗೆ ಸಿಲುಕಿಕೊಂಡು ನುಜ್ಜುಗುಜ್ಜಾಗಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಆವೇಳೆಗೆ ಆತ ಮೃತಪಟ್ಟಿದ್ದಾನೆ.

ಮೃತ ಬೈಕ್ ಸವಾರನ ಬಗ್ಗೆ ಇನ್ನಷ್ಟೆ ಮಾಹಿತಿ ತಿಳಿದುಬರಬೇಕಾಗಿದೆ.

ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here