ಓಡಿಲ್ನಾಳ: ಸ.ಉ.ಪ್ರಾ.ಶಾಲೆಯಲ್ಲಿ ಶಾಲಾ ಪ್ರಾರಂಭೊತ್ಸವ

0

ಓಡಿಲ್ನಾಳ: ಸ.ಉ.ಪ್ರಾ.ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ಮೇ 31ರಂದು ಅದ್ದೂರಿಯಾಗಿ ನೆರವೇರಿತು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು, ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ಶಮೀಮಾ ಇವರ ಉಪಸ್ಥಿತಿಯಲ್ಲಿ ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಎಸ್ ಡಿ ಎಮ್ ಸಿ ಅಧ್ಯಕ್ಷರು ಎಲ್ಲಾ ಮಕ್ಕಳಿಗೆ ಪೆನ್ಸಿಲ್ ಮತ್ತು ಸಿಹಿತಿಂಡಿ ನೀಡಿ, ಶೈಕ್ಷಣಿಕ ವರ್ಷದ ಕಲಿಕಾ ಚಟುವಟಿಕೆಗಳಿಗೆ ಶುಭ ಹಾರೈಸಿದರು.

ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯೆ ಆನಂದಿ, ಎಸ್‌.ಡಿ.ಎಂ.ಸಿ ಸರ್ವ ಸದಸ್ಯರು, ಶಾಲಾ ಮುಖ್ಯ ಶಿಕ್ಷಕಿ ಉಷಾ ಪಿ ಹಾಗೂ ಅಧ್ಯಾಪಕ ವೃಂದ, ಪೋಷಕರು, ಹಳೆ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿ ಯಲ್ಲಿ ಈ ಕಾರ್ಯಕ್ರಮ ಅತ್ಯುತ್ತಮವಾಗಿ ಸಂಪನ್ನಗೊಂಡಿತು.

ದೈಹಿಕ ಶಿಕ್ಷಕ ನಿರಂಜನ್ ಕಾರ್ಯಕ್ರಮ ನಿರೂಪಿಸಿದರು. ವಿಲ್ಮೆಂಟ್ ಸೆರಾವೋ ಪ್ರಾರ್ಥಿಸಿ, ಶಾಲಾ ಮುಖ್ಯ ಶಿಕ್ಷಕಿ ಉಷಾ ಪಿ ಸ್ವಾಗತಿಸಿ ಶಿಕ್ಷಕಿ ಶಾರದಾ ಮಣಿ ಧನ್ಯವಾದಗೈದರು.

LEAVE A REPLY

Please enter your comment!
Please enter your name here