ಬಳಂಜ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರಮ

0

ಬೆಳ್ತಂಗಡಿ: ಬಳಂಜ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮವು ಮೇ 31ರಂದು ಜರುಗಿತು.

ವಿದ್ಯಾರ್ಥಿಗಳು ಖುಷಿಯಿಂದ ಶಾಲೆಗೆ ಆಗಮಿಸಿದರು. ಹೂ ನೀಡಿ,ತಿಲಕ ಹಚ್ಚಿ, ಅರತಿ ಬೆಳಗಿ ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಬರಮಾಡಿಕೊಳ್ಳಲಾಯಿತು‌.‌‌‌‌‌ ಬಳಿಕ ನಡೆದ ಸಭೆಯಲ್ಲಿ ಸರಕಾರದಿಂದ ಸಿಗುವ ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು.

ಶಾಲ ಬೆಳವಣಿಗೆ, ಮತ್ತು ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಾಣ, ಅಮೃತ ಮಹೋತ್ಸವ ಹೊಸ್ತಿಲಲ್ಲಿರುವ ಬಳಂಜ ಶಾಲೆಯ ವಿವಿಧ ಚಟುವಟಿಕೆಗಳ ಬಗ್ಗೆ ಸಮಾಲೋಚಿಸಲಾಯಿತು.ಬಳಂಜ ಶಿಕ್ಷಣ ಟ್ರಸ್ಟ್ ನ ಅದ್ಯಕ್ಷ ಮನೋಹರ್ ಬಳಂಜ, ಪ್ರೌಢಶಾಲಾ ಮುಖ್ಯೋಪಾದ್ಯಾಯಿನಿ ಸುಲೋಚನಾ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ರತ್ನಾಕರ ಪೂಜಾರಿ, ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿಕೆ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಅಧ್ಯಕ್ಷ ಸುಕೇಶ್ ಪೂಜಾರಿ, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಚೇತನ ಜೈನ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ, ಪ್ರೌಢ ಶಾಲಾ ಹೆಚ್.ಎಮ್ ಸುಲೋಚನಾ ಹಾಗೂ ಪ್ರಮುಖರಾದ ಪ್ರಮೋದ್ ಜೈನ್, ವಿನು ಬಳಂಜ,ರತ್ನರಾಜ್ ಜೈನ್, ಪ್ರವೀಣ್ ಕುಮಾರ್ ಹೆಚ್.ಎಸ್, ರಾಕೇಶ್ ಹೆಗ್ಡೆ,ವಿಶ್ವನಾಥ ಹೊಳ್ಳ, ಸತೀಶ್ ಕೆ,ಗಣೇಶ್ ಸಂಭ್ರಮ,ಸತೀಶ್ ರೈ ಬಾರ್ದಡ್ಕ ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು, ಶಿಕ್ಷಣ ಟ್ರಸ್ಟ್ ಮತ್ತು ಅಮೃತ ಮಹೋತ್ಸವ ಸಮಿತಿ ಸದಸ್ಯರು ಹಾಗೂ ಹೆತ್ತವರು, ವಿದ್ಯಾರ್ಥಿಗಳು,ಮೊದಲಾದವರು ಉಪಸ್ಥಿರಿದ್ದರು. ಪ್ರೌಢಶಾಲಾ ಮುಖ್ಯೋಪಾದ್ಯಾಯಿನಿ ಸುಲೋಚನಾ ಸ್ವಾಗತಿಸಿ ಸಹ ಶಿಕ್ಷಕಿ ವೀಣಾ ನಿರೂಪಿಸಿದರು.

p>

LEAVE A REPLY

Please enter your comment!
Please enter your name here