ಅರಸಿನಮಕ್ಕಿ: ವಲಯದ ಹತ್ಯಡ್ಕ ಎ ಮತ್ತು ಬಿ ಕಾರ್ಯಕ್ಷೇತ್ರದ ನೂತನ ಸೇವಾಕೇಂದ್ರವನ್ನು ಅರಸಿನಮಕ್ಕಿ ಅನುಗ್ರಹ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟಿಸಲಾಯಿತು.
ಉದ್ಘಾಟನೆಯನ್ನು ತಾಲೂಕು ಜನ ಜಾಗೃತಿ ಸದಸ್ಯರಾದ ಹೆಚ್.ಎಸ್ ಚೆನ್ನಪ್ಪ ಗೌಡ ಹಾಗೂ ಮಂಜುಳಾ ಕಾರಂತ ಇವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರುಗಳಾದ ಕುಶಾಲಪ್ಪ ಮತ್ತು ಸುನಂದಾ, ಜನ ಜಾಗೃತಿ ಗ್ರಾಮ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ ಗುತ್ತು, ಅರಸಿನಮಕ್ಕಿ ಶಿಶಿಲ ವಿಪತ್ತು ಘಟಕದ ಸ್ವಯಂ ಸೇವಕರು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೇಲ್ವಿಚಾರಕಿ ಶಶಿಕಲಾ ಪ್ರಾಸ್ತವಿಕವಾಗಿ ಮಾತಾಡಿದರು.
p>