ಧರ್ಮಸ್ಥಳ: ಆಕ್ಟೀವಾಗೆ ಡಿಕ್ಕಿ ಹೊಡೆದು ಕಾರು ಪರಾರಿ- ಈರ್ವರು ಗಂಭೀರ

0

ಧರ್ಮಸ್ಥಳ: ಮೇ 28ರಂದು ಮಧ್ಯಾಹ್ನ ಧರ್ಮಸ್ಥಳ ನೇತ್ರಾವತಿಯ ಶಾಂತಿವನ ಸಮೀಪ ಅಪರಿಚಿತ ಕಾರೊಂದು ಧರ್ಮಸ್ಥಳ ಮೂಲದ ಇಬ್ಬರು ಯುವಕರು ಹೋಂಡಾ ಆಕ್ಟಿವಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಿಂಬದಿಯಿಂದ ಡಿಕ್ಕಿ ಹೊಡೆದು‌ ಪರಾರಿಯಾದ ಘಟನೆ ನಡೆದಿದೆ.

ಉಜಿರೆ- ಧರ್ಮಸ್ಥಳ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು ಗಂಭೀರ ಗಾಯಗೊಂಡಿದ್ದ ಇಬ್ಬರು ಯುವಕರನ್ನು ಸ್ಥಳೀಯ ಆಟೋ ಚಾಲಕರು ಉಜಿರೆ ಖಾಸಗಿ‌ ಆಸ್ಪತ್ರೆಗೆ ದಾಖಲಿಸಿದ್ದಾರೆ.‌ಘಟನಾ ಸ್ಥಳಕ್ಕೆ ಧರ್ಮಸ್ಥಳ ಹಾಗೂ ಬೆಳ್ತಂಗಡಿ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here