ರೆಖ್ಯ ಗ್ರಾಮದ ಬಡ ಕುಟುಂಬಕ್ಕೆ ನೆರವಾದ ಶೌರ್ಯ ವಿಪತ್ತು ತಂಡ

0

ರೆಖ್ಯ: ಗ್ರಾಮದ ಕಿಲೆಂಜಿನೋಡಿ ಶ್ಯಾಮಲ ಎಂಬ ಬಡ ಕುಟುಂಬದ ಮನೆಯ ಛಾವಣಿ ತೀರಾ ಜೀರ್ಣಾವಸ್ಥೆಯಲ್ಲಿದ್ದು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಎರಡು ಹೊಸ ಶೀಟ್ ಗಳನ್ನು ಅಳವಡಿಸಿ ಮೂಲೆ ಹೆಂಚುಗಳನ್ನು ಇಟ್ಟುಕೊಟ್ಟು ನೇರವಾದರು.

ಈ ಮನೆಯಲ್ಲಿ ತಾಯಿ ಗಿರಿಜಾ (65 ವ)ಮಗಳು ಶ್ಯಾಮಲಾ (40 ವ) ಇಬ್ಬರೇ ವಾಸಮಾಡುತ್ತಿದ್ದೂ ತಾಯಿ ಅಂಗವಿಕಲರಾಗಿದ್ದು ಆರ್ಥಿಕವಾಗಿ ತೀರಾ ಬಡತನದಿಂದ ಕೂಡಿದ ಇವರ ಚಿಕ್ಕ ಕುಟುಂಬಕ್ಕೆ ಆದಾಯದ ಮೂಲ ಯಾವುದು ಇಲ್ಲ ವಿಧವ ವೇತನ 1200 ಮಾತ್ರ ಇವರ ಖರ್ಚಿಗೆ ಪಡಿತರ ಅಕ್ಕಿಯಲ್ಲಿ ಜೀವನ ಸಾಗಿಸುತ್ತಿದ್ದ ಇವರು ವಾಸಿಸಲು ಯೋಗ್ಯವಲ್ಲದ ಮನೆಯಲ್ಲಿ ವಾಸಿಸುತ್ತಿದ್ದರು.

ಮನೆ ರಿಪೇರಿ ಕೆಲಸದಲ್ಲಿ ಶೌರ್ಯ ವಿಪತ್ತು ತಂಡದ ಶೀನಪ್ಪ ನಾಯ್ಕ್, ಕುಶಾಲಪ್ಪ ಗೌಡ,ಪ್ರಕಾಶ್ ರೆಖ್ಯ, ಪ್ರವೀಣ ಪತ್ತಿಮಾರು, ಅವಿನಾಶ್ ಭಿಡೆ, ಚೇತನ್ ರೆಖ್ಯ, ರಮೇಶ ಬೈರಕಟ್ಟ, ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು.

ಚೇತನ್ ರೆಖ್ಯ ಮತ್ತು ಅವಿನಾಶ್ ಭಿಡೆ, ಎರಡು ಶೀಟ್ ಗಳನ್ನು ನೀಡಿ ನೇರವಾದರು.

ಈ ಸಂದರ್ಭದಲ್ಲಿ ವಿಶೇಷವಾಗಿ ಅಂತರ್ರಾಷ್ಟ್ರೀಯ ಕಲಾವಿದರು, ಲೇಖಕ.ಪರಿಸರ ಪ್ರೇಮಿ ದಿನೇಶ್ ಹೊಳ್ಳ ಜತೆಯಲ್ಲಿದ್ದು ಶೌರ್ಯ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here