ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣ: ಪ್ರಮೋದ್ ಉಜಿರೆ, ಶಶಿರಾಜ್ ಶೆಟ್ಟಿ, ಲೋಕನಾಥ ಪೂಜಾರಿ ವಿರುದ್ಧ ಬೆಳ್ತಂಗಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಗಣಿ ಇಲಾಖೆ

0

ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದಡಿ ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಮೂವರ ವಿರುದ್ಧ ಖಾಸಗಿ ಕೇಸು ದಾಖಲಿಸಲಾಗಿದೆ.‌
ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಗಿರೀಶ್ ಮೋಹನ್ ಎಸ್. ಎನ್. ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆರವರು ಪ್ರಮೋದ್ ಉಜಿರೆ ಪಯ್ಯ ಗುಡ್ಡದ ಮನೆ ದಿಡುಪೆ, ಮಲವಂತಿಗೆ ಗ್ರಾಮ ಬೆಳ್ತಂಗಡಿ, ಶಶಿರಾಜ್ ಶೆಟ್ಟಿ ಕಡಂಬು ಮನೆ ಮೇಲಂತಬೆಟ್ಟು ಗ್ರಾಮ & ಅಂಚೆ ಬೆಳ್ತಂಗಡಿ, ಮತ್ತು ಲೋಕನಾಥ ಪೂಜಾರಿ (ಸೂರಪ್ಪ ಪೂಜಾರಿ) ಮೂಡಲ ಮನೆ, ಮೇಲಂತಬೆಟ್ಟು ಅಂಚೆ ಬೆಳ್ತಂಗಡಿರವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದಂಡ ಪ್ರಕ್ರಿಯಾ ಸಂಹಿತೆ ಕಲಂ 200 ಮತ್ತು ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ 1957 ರ ಕಲಂ 4(1) ಮತ್ತು ಕಲಂ 9 ಮತ್ತು 21, 23 ಸಿ ಮತ್ತು ಕರ್ನಾಟಕ ಉಪಖನಿಜ ರಿಯಾಯಿತಿ 1994 5 3 20205 2 3(1), 36(3), 42(1), 43(2) 2 44 0ರಡಿ ಪ್ರಕರಣ ದಾಖಲಿಸಲಾಗಿದ್ದು ಈ ಪ್ರಕರಣದಲ್ಲಿ ಫಿರ್ಯಾದಿದಾರರು ಮೇಲ್ಕಾಣಿಸಿದ ಕಾಯಿದೆಗಳನ್ವಯ ಮತ್ತು ಕರ್ನಾಟಕ ಸರ್ಕಾರದ ನಿಯಾಮಾನುಸಾರ ತನಿಖೆ ನಡೆಸಿ ಫಿರ್ಯಾದಿಯನ್ನು ಸಲ್ಲಿಸಲು ಅಧಿಕಾರ ಹೊಂದಿರುತ್ತಾರೆ. ಈ ಪ್ರಕರಣವು ನ್ಯಾಯಾಲಯದ ಸರಹದ್ದಿನ ಬೆಳ್ತಂಗಡಿ ತಾಲ್ಲೂಕು ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬ ಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದ್ದು ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಹೊಂದಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕು ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬ ಸ್ಥಳದಲ್ಲಿರುವ ಸರ್ವೆ ನಂ 12 ರಲ್ಲಿ ಅಕ್ರಮ ಕಟ್ಟಡ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ ಸದರಿ ಪ್ರದೇಶಕ್ಕೆ ತಹಶೀಲ್ದಾರರು ದಿನಾಂಕ 18-05-2024 ರಂದು 19:30 ಗಂಟೆ ಸಮಯಕ್ಕೆ ಗ್ರಾಮ ಸಹಾಯಕ ರಹಾನ್, ತಾಲ್ಲೂಕು ಕಛೇರಿ ಸಿಬ್ಬಂದಿ ಪ್ರಜ್ವಲ್, ಬೆಳ್ತಂಗಡಿ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮುರಳೀಧರ್ ಜೊತೆಗೂಡಿ ದಾಳಿ ನಡೆಸಿದ್ದು, ದಾಳಿಯಲ್ಲಿ ಅಕ್ರಮ ಕಲ್ಲು ತೆಗೆದಿರುವುದರ ಬಗ್ಗೆ ಹಾಗೂ ಅದರ ರಾಶಿ ಮತ್ತು ಸಿಡಿ ಮದ್ದುಗಳು ಸ್ಥಳದಲ್ಲಿಯೇ ಸಿಕ್ಕಿರುವುದಾಗಿ ಹಾಗೂ ಹಿಟಾಚಿ-1, ಟ್ರಾಕ್ಟರ್-1, ಮದ್ದುಗುಂಡು ಜೀವಂತ 4, ಮದ್ದುಗುಂಡು ಬಳಸಿದಂತಹ 4 ಹಾಗೂ ಕೆಲಸದವರು (1) ನಿತೇಶ್, (2) ಚಂದ್ರಶೇಖರ, (3) ಪ್ರಮೋದ್, (4) ರಾಜೇಶ್ ಇದ್ದು ಇದರಲ್ಲಿ ನಿತೇಶ್ ಎಂಬಾತನನ್ನು ವಿಚಾರಿಸಲಾಗಿ, ಈ ಅಕ್ರಮ ಗಣಿಗಾರಿಕೆಯನ್ನು ಪ್ರಮೋದ್ ಉಜಿರೆ ಮತ್ತು ಶಶಿರಾಜ್ ರವರು ಮಾಡುತ್ತಾರೆಂದು ತಿಳಿಸಿರುತ್ತಾರೆ.ಗಣಿಗಾರಿಕೆ ಸ್ಥಳದಲ್ಲಿ ಸಿಕ್ಕ ವಸ್ತುಗಳು (1) Hitachi L & I KOMAT SU PC 71-1 ಇದರ ಅಂದಾಜು ಮೌಲ್ಯ ರೂ. 3 ಲಕ್ಷ ಆಗಬಹುದು (2) Tractor-1 No. KA 21 T 134 ಇದರ ಅಂದಾಜು ಮೌಲ್ಯ ರೂ. 1 ಲಕ್ಷ (3) ಬಳಸಿದ ಮದ್ದುಗುಂಡುಗಳು ವಯರ್ ಸಮೇತ-4 (4) ಜೀವಂತ ಮದ್ದುಗುಂಡುಗಳು-4 (5) ಒಡೆದ ಕಲ್ಲುಗಳನ್ನು ಸ್ಥಳದಲ್ಲಿಯೇ ಇರಿಸಿ ಜಪ್ತಿಮಾಡಿದ ಸೊತ್ತುಗಳನ್ನು ಸುಪರ್ದಿಗೆ ತೆಗೆದುಕೊಂಡು ಅಕ್ರಮ ಕಲ್ಲು ಗಣಿಗಾರಿಕೆ ಚಟುವಟಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.

ಸದರಿ ಪ್ರದೇಶವನ್ನು ದಿನಾಂಕ 20-05-2024 ರಂದು ಕಛೇರಿಯ ಕಿರಿಯ ಅಭಿಯಂತರರ ಜೊತೆಯಲ್ಲಿ ಭೇಟಿ ಇತ್ತು ಪರಿಶೀಲಿಸಲಾಗಿ ಸದರಿ ಸರ್ವೆ ಸಂಖ್ಯೆ 12/1 ರಲ್ಲಿ ಎರಡು ಕಡೆ ಅನಧಿಕೃತವಾಗಿ ಕಟ್ಟಡ ಕಲ್ಲು ಉಪಖನಿಜವನ್ನು ಗಣಿಗಾರಿಕೆ ನೆಡೆಸಿರುವುದು ದೃಢಪಟ್ಟಿದ್ದು ಪ್ರದೇಶದ ಅಕ್ಷಾಂಶ ಮತ್ತು ರೇಖಾಂಶವು (1) N 13 00 34.05 E 75 15 51.92 (2)N 13 0 34.05, E 75 15 51.92 (3) N 13 00 34.73 E 75 15 51.23 (4) N 13 00 34.84 E 75 45 51.51 ಆಗಿರುತ್ತದೆ ಸ್ಥಳ ಪರಿಶೀಲನೆಯಂತೆ ಪ್ರದೇಶದಲ್ಲಿ ಅಂದಾಜು ಸುಮಾರು 1,571.7 ಮೆ.ಟನ್ ಕಟ್ಟಡ ಕಲ್ಲು ಉತ್ಪಾದಿಸಿ ಸಾಗಾಟ ಮಾಡಿರುವುದು ಕಂಡುಬಂದಿರುತ್ತದೆ ಮತ್ತು ಪ್ರದೇಶದಲ್ಲಿ ಕಲ್ಲು ತೆಗೆಯಲು ಸ್ಪೋಟಕಗಳನ್ನು ಬಳಸಿದ್ದು ಸ್ಪೋಟಿಸಲು ಉಪಯೋಗಿಸಿದ್ದ ಕಿತ್ತಳೆ ವರ್ಣದ ನಾಲ್ಕು ಉಪಯೋಗಿಸದ ಫ್ಯೂಸ್ ಮತ್ತು ಒಂದು ಉಪಯೋಗಿಸಿರುವ ಫ್ಯೂಸ್ ಹಾಗೂ ಕಿತ್ತಳೆ ವರ್ಣದ ಕನೆಕ್ಟಿಂಗ್ ವೈರ್ಗಳು ಬಿದ್ದಿರುತ್ತವೆ ಅವುಗಳನ್ನು ಸಂಗ್ರಹಿಸಿ ಹಳದಿ ವರ್ಣದ ಪ್ಲಾಸ್ಟಿಕ್ ಚೀಲಕ್ಕೆ ಹಾಕಿ ತರಲಾಗಿರುತ್ತದೆ ಮತ್ತೂ ಸ್ಪೋಟಕಗಳನ್ನು ಬಳಸಲು ಕಲ್ಲಿಗೆ ಕುಳಿಗಳನ್ನು ಹಾಕಿರುವುದು ಕಂಡುಬಂದಿರುತ್ತದೆ. ಪ್ರದೇಶಕ್ಕೆ ತಾಗಿಕೊಂಡು ಇರುವ ಸೂರಪ್ಪ ಪೂಜಾರಿ ಇವರ ಒಡೆತನದ ಪಟ್ಟಾ ಭೂಮಿ ಸರ್ವೆ ಸಂಖ್ಯೆ 63/1ಎ ರಲ್ಲಿ ಅಕ್ರಮ ಗಣಿಗಾರಿಕೆ ಮಾಡುವ ಪ್ರದೇಶಕ್ಕೆ ರಸ್ತೆ ನಿರ್ಮಾಣ ಮಾಡಿಕೊಂಡು ಉತ್ಪಾದಿಸಿದ ಕಟ್ಟಡ ಕಲ್ಲನ್ನು ಸಾಗಾಟಿ ಮಾಡಿರುವುದು ಕಂಡುಬಂದಿರುತ್ತದೆ ಪ್ರದೇಶದಲ್ಲಿ ಅಂದಾಜು ಸುಮಾರು 65 ರಿಂದ 70 ಮೆಟ್ರಿಕ್ ಟನ್ ಕಟ್ಟಡ ಕಲ್ಲು ದಾಸ್ತಾನಿರುತ್ತದೆ. ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಹಾಜರಿದ್ದ ಸ್ಥಳೀಯರನ್ನು ವಿಚಾರಿಸಲಾಗಿ ಹಾಗೂ ತಹಶೀಲ್ದಾರರು ಬೆಳ್ತಂಗಡಿ ತಾಲ್ಲೂಕು ಇವರು ದಿನಾಂಕ 18-05-2024 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಂತೆ ಪ್ರದೇಶದಲ್ಲಿ ಪ್ರಮೋದ್ ಉಜಿರೆ, ಶಶಿರಾಜ್ ಶೆಟ್ಟಿ ಮತ್ತು ಸೂರಪ್ಪ ಪೂಜಾರಿ ಇವರುಗಳು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಗಣಿಗಾರಿಕೆ ಮಾಡಿರುವುದು ದೃಢಪಟ್ಟಿರುತ್ತದೆ. ಈ ಪ್ರಕರಣ ಸಂಬಂಧ ತಯಾರಿಸಿದ ಮಹಜರನ್ನು ಸರಹದ್ದಿನ ನ್ಯಾಯಾಲಯಕ್ಕೆ ಈ ಪಿರ್ಯಾದಿಯೊಂದಿಗೆ ಲಗತ್ತಿಸಲಾಗಿದೆ. ಈ ಪ್ರಕರಣದ ಆರೋಪಿಗಳು ಅಕ್ರಮವಾಗಿ ಸರಕಾರದ ಅಮೂಲ್ಯ ಉಪಖನಿಜವಾದ ಕಟ್ಟಡಕಲ್ಲನ್ನು ಯಾವುದೇ ಪರವಾನಿಗೆ ಇಲ್ಲದೆ ಹಾಗೂ ಸರಕಾರಕ್ಕೆ ರಾಜಸ್ವ ಸಂದಾಯ ಮಾಡದೆ ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡುತ್ತಿರುವುದು ದೃಢಪಟ್ಟಿರುವುದರಿಂದ Mines & Minerals (Development and Regulation) Act 1957 (Amendment 2015) ರ ಕಲಂ 4, 4(14) a Karnataka Minor Minerals Concession Rules 1994 (Amendment Rules 2023) ರ ನಿಯಮ 3(1), 42(1), 43 ಮತ್ತು 44 ಗಳ ಶಿಕ್ಷೆಗೆ ಬದ್ಧರಾದ ಅಪರಾಧವೆಸಗಿರುವುದು ದೃಢಪಟ್ಟಿರುವುದರಿಂದ ಆರೋಪಿತರ ವಿರುದ್ಧ ಸಲ್ಲಿಸಿದ ಫಿರ್ಯಾದಿಯಾಗಿದೆ. MMDR Act 1957 (Amendment 2015) ರ ಕಲಂ 22 ರನ್ವಯ Cr.P.C 200 ರಡಿಯಲ್ಲಿ ನ್ಯಾಯಾಲಯದಲ್ಲಿ ದೂರು ನೀಡಲು ಅಧಿಕಾರ ಹೊಂದಿದ್ದು, ಅನಧಿಕೃತವಾಗಿ ಕಟ್ಟಡಕಲ್ಲು ಗಣಿಗಾರಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಅವರಿಗೆ ಶಿಕ್ಷೆ ನೀಡಬೇಕಾಗಿ ನಿವೇಧಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

LEAVE A REPLY

Please enter your comment!
Please enter your name here