

ಬೆಳ್ತಂಗಡಿ: ಎ.26 ರಿಂದ ಎ.28ರವರೆಗೆ ಇಚಿಲಂಪಾಡಿ ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ ಜಿನಮಂದಿರದಲ್ಲಿ ನಡೆದ ಧಾಮ ಸಂಪ್ರೋಕ್ಷಣಾ ಪುನಃ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ಹಾಗೂ ಜೀರ್ಣೋದ್ಧಾರ ಸಂದರ್ಭದಲ್ಲಿ ಸಂಪೂರ್ಣವಾಗಿ ಸಹಕರಿಸಿದ ಧರ್ಮಸ್ಥಳದ ರಾಜ್ಯ ಸರ್ಕಾರಿ ನೌಕರರ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ಕೆ.ಜಯಕೀರ್ತಿ ಅವರನ್ನು ಆಡಳಿತ ಸಮಿತಿ ಹಾಗೂ ಸದ್ಧರ್ಮ ಬಂಧುಗಳ ಪರವಾಗಿ ಕಾರ್ಕಳ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಸನ್ಮಾನಿಸಿ ಆಶೀರ್ವದಿಸಿದರು.