ಬೆಳ್ತಂಗಡಿ: ವಿದೇಶದಿಂದ ಬರಬೇಕಿದ್ದ ವರ ಬಾರದ ಕಾರಣ ಕೊನೆಯ ಕ್ಷಣದಲ್ಲಿ ಮದುವೆ ಮುಂದೂಡಲ್ಪಟ್ಟ ಘಟನೆ ಕೊಕ್ಕಡದಲ್ಲಿ ನಡೆದಿದೆ.
ಏ.18ರಂದು ಕೊಕ್ಕಡದ ಯುವತಿ ಹಾಗೂ ಕೊಪ್ಪ ತಾಲೂಕಿನ ಯುವಕನೊಂದಿಗೆ ಕೊಕ್ಕಡದ ಶ್ರೀ ತ್ರಿಗುಣಾತ್ಮಿಕ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ವಿವಾಹ, ಬಳಿಕ ಮನೆಯಲ್ಲೇ ಔತಣಕೂಟ ನಡೆಯಬೇಕಿತ್ತು. ಮಾಂಸದಡುಗೆ ಸಹಿತ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದವು.
ವಿದೇಶದಲ್ಲಿರುವ ಯುವಕ ಅನಿವಾರ್ಯ ಕಾರಣಗಳಿಂದಾಗಿ ಊರಿಗೆ ಬರಲು ಸಾಧ್ಯ ಆಗದಿರುವುದು ಮದುವೆ ಮುಂದೂಡಲ್ಪಡಲು ಕಾರಣ. ಏ.17ರಂದು ರಾತ್ರಿ ಮದುರಂಗಿ ಶಾಸ್ತ್ರ ನಡೆದಿದ್ದು, ನೂರಾರು ಮಂದಿ ಭಾಗವಹಿಸಿದ್ದರು. ವರ ಕೊನೇ ಕ್ಷಣದವರೆಗೂ ಊರಿಗೆ ಬರಲು ಯತ್ನಿಸಿದ್ದು, ಆತ ಕೆಲಸ ಮಾಡುವ ಕಂಪನಿಯಲ್ಲಿ ಉಂಟಾದ ಸಮಸ್ಯೆಯಿಂದಾಗಿ ಸಾಧ್ಯವಾಗಲಿಲ್ಲ. ತಡರಾತ್ರಿವರೆಗೂ ಮಾಡಿದ ಪ್ರಯತ್ನಗಳಿಗೆ ಫಲ ದೊರೆಯದ ಕಾರಣ ಮದುವೆ ಮುಂದೂಡಲಾಗಿದೆ. ವರ ಊರಿಗೆ ಬಂದ ಬಳಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ವಧುವಿನ ಮನೆಯವರು ತಿಳಿಸಿದ್ದಾರೆ.
p>