ಅಳದಂಗಡಿ: ಪಿಲ್ಯ ಗ್ರಾಮದ ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ವತಿಯಿಂದ ದೇವಳದ ವರ್ಷಾವಧಿ ಜಾತ್ರೆಯು ಎ.20 ರಿಂದ 24 ರವರೆಗೆ ತಂತ್ರಿಗಳಾದ ಕಾಜಿಮುಗೇರು ಸೀತಾರಾಮ ಕೇಳ್ಕರ್ ಅವರ ನೇತೃತ್ವದಲ್ಲಿ ನಡೆಯಲಿದೆ.
ಎ.20ರಂದು ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ದೊರೆಯಲಿದೆ.ಸಂಜೆ ಲಲಿತಾ ಮಹಿಳಾ ಭಜನಾ ಸಂಘ ಸೂಳಬೆಟ್ಟು ಇವರಿಂದ ಭಜನಾ ಸತ್ಸಂಗ ಬಳಿಕ ಪಿಲ್ಯ ಮಹಮ್ಮಾಯಿ ಭಜನಾ ಸಂಘದವರಿಂದ ಕುಣಿತ ಭಜನೆ, ದೇವರ ಉತ್ಸವ.
ಎ.21ರಂದು ಸಂಜೆ ಕೀರ್ತನ ಕಲಾ ತಂಡ ಮುಂಡಾಜೆ ಇವರಿಂದ ಭಜನಾ ಸತ್ಸಂಗ ಬಳಿಕ ಶ್ರೀಗೋಪಾಲಕೃಷ್ಣ ಭಜನಾ ಮಂಡಳಿ ಸೂಳಬೆಟ್ಟು ಇವರಿಂದ ಕುಣಿತ ಭಜನೆ, ನಂತರ ವಸಂತ ಪೂಜೆ, ರಾತ್ರಿ ದರ್ಶನ ಬಲಿ, ಪಲ್ಲಕಿ ಉತ್ಸವ.
ಎ.22ರಂದು ಬೆಳಿಗ್ಗೆ ಅಥರ್ವಶೀರ್ಷ ಸಹಸ್ರಾವರ್ತನ ಅಭಿಷೇಕ, ಸಂಜೆ ನಾದ ಮಾಧುರ್ಯ ಬಳಗ ಸೂಳಬೆಟ್ಟು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಶ್ರೀರಾಮ ಭಜನಾ ಬಳಗ ಫಂಡಿಜೆ ಇವರಿಂದ ಭಜನಾ ಸತ್ಸಂಗ ನಂತರ ವಸಂತ ಪೂಜೆ, ರಾತ್ರೆ ದೇವರ ಉತ್ಸವ, ಭೂತ ಬಲಿ ನೆರವೇರಲಿದೆ.
ಎ.23ರಂದು ಬೆಳಿಗ್ಗೆ ಕವಾಟೋದ್ಘಾಟನೆ, ರಥ ಕಲಶ. ರಥಾರೋಹಣ, ಸಂಜೆ ಅಳದಂಗಡಿ ಡಾ| ಪದ್ಮಪ್ರಸಾದ ಅಜಿಲ ಇವರ ಉಪಸ್ಥಿತಿಯಲ್ಲಿ ದೇವರ ಉತ್ಸವ, ಪಲ್ಲಕಿ ಉತ್ಸವ, ವಸಂತ ಕಟ್ಟೆ ಉತ್ಸವ, ಕೊಡಮಣಿತ್ತಾಯ ದೈವದ ನೇಮ, ಮಹಾ ರಥೋತ್ಸವ, ದೈವ-ದೇವರ ಭೇಟಿ ನಡೆಯಲಿದೆ.
ಎ.24ರಂದು ಅವಭೃತೋತ್ಸವ, ಧ್ವಜಾವರೋಹಣದ ಮೂಲಕ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದು ಆಡಳಿತ ಮೊಕ್ತೇಸರ ಎನ್. ಸದಾನಂದ ಸಹಸ್ರಬುದ್ಧೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.