ಗೇರುಕಟ್ಟೆ: ಕುಂಟಿನಿ ಮನೆಯಲ್ಲಿ ಕುಂಟಿನಿ ಕುಟುಂಬಸ್ಥರಿಂದ ಮಾ.30ರಂದು ಕುಂಟಿನಿ ಶ್ರೀ ರಾಘವೇಂದ್ರ ಬಾಂಗಿಣ್ಣಾಯರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ 8ರಿಂದ ಮಹಾಗಣಪತಿ ಹೋಮ, ಶ್ರೀ ವೆಂಕಟರಮಣ ದೇವರ ಪೂಜೆ (ಮುಡಿಪು ಕಟ್ಟುವುದು) ನಾಗಬನದಲ್ಲಿ ನಾಗ ದೇವರಿಗೆ ತಂಬಿಲ ಮತ್ತು ಆಶ್ಲೇಷ ಬಲಿ ಪೂಜೆ, ದೈವಗಳ ಗುಡಿಯಲ್ಲಿ ಕಲಶ, ಹೋಮ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ ಸಂಜೆ 5ರಿಂದ ಶ್ರೀ ದುರ್ಗಾ ಪೂಜೆ, 7.00ಕ್ಕೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆದು ರಾತ್ರಿ ಗಂಟೆ 8.30ಕ್ಕೆ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಭಂಡಾರ ತೆಗೆದು ಎಣ್ಣೆ ವೀಳ್ಯಾ ಕೊಟ್ಟು ಅನ್ನಸಂತರ್ಪಣೆ ರಾತ್ರಿ 10ರಿಂದ ದೈವಗಳ ಗಗ್ಗರ ಸೇವೆ ನಡೆಯಿತು.
ಕುಂಟಿನಿ ಮನೆಯವರು ಕುಟುಂಬಸ್ಥರು, ಬಂಧು ಮಿತ್ರರು, ಭಕ್ತಾಧಿಗಳು ಉಪಸ್ಥಿತರಿದ್ದರು.
p>