ಬೆಳಾಲು: ಶ್ರೀ ಮಾಯ ಮಹಾದೇವ ದೇವಸ್ಥಾನದ 9ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ಈ ವರ್ಷದ ವಾರ್ಷಿಕ ಜಾತ್ರೋತ್ಸವದ ಲೆಕ್ಕ ಪತ್ರ ಮಂಡನೆ ಕಾರ್ಯಕ್ರಮ ಮಾ.24ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಹೆಚ್. ಪದ್ಮ ಗೌಡ ವಹಿಸಿದ್ದರು.
ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ, ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಸದಸ್ಯರುಗಳಾದ ರಾಜಪ್ಪ ಗೌಡ ಪುಚ್ಚೆಹಿತ್ಲು , ನಾಣ್ಯಪ್ಪ ಪೂಜಾರಿ ಮುಂಡ್ರೋಟ್ಟು, ಗಂಗಯ್ಯ ಗೌಡ ಅದವೂರು, ದಿನೇಶ ಎಂ. ಕೆ., ಸುಕನ್ಯಾ ನಾರಾಯಣ ಸುವರ್ಣ ಮಂಜನೊಟ್ಟು, ಚಂದ್ರಾವತಿ ಕೊಲ್ಲಿಮಾರು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಂತಿ ಮುಂಡ್ರೋಟ್ಟು, ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಯ ಒಕ್ಕೂಟದ ಅಧ್ಯಕ್ಷ ಭುವನೇಶ್ ಅಂಗಡಿಬೆಟ್ಟು, ಪ್ರತಿಷ್ಠಾ ಮಹೋತ್ಸವದಲ್ಲಿ ಮಾಯ ಗುತ್ತು ಪುಷ್ಪದಂತ ಜೈನ್, ಪವಿತ್ರಪಾಣಿ ಮೋಹನ ಕೆರ್ಮುಣ್ಣಾಯ, ಅರ್ಚಕ ಕೇಶವ ರಾಮಯಾಜಿ, ಭಜನಾ ಮಂಡಳಿ, ಮಾಯ ಫ್ರೆಂಡ್ಸ್, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪದಾಧಿಕಾರಿಗಳು, ಊರ ಭಕ್ತರು ಹಾಜರಿದ್ದರು. ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು ಸ್ವಾಗತಿಸಿದರು.
ಅಶ್ವಥ್ ಗುಂಡ್ಯ ಲೆಕ್ಕ ಪತ್ರ ವಾಚಿಸಿದರು. ಧರ್ಮೇಂದ ಕುಮಾರ್ ಪುಚ್ಚೆಹಿತ್ಲು ನಿರೂಪಿಸಿದರು.