ಬೆಳ್ತಂಗಡಿ: ತಾಲೂಕು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಪಿಸಿ ಸೆಬಾಸ್ಟಿಯಾನ್ ಮುಂಡಾಜೆ ಅವರನ್ನು ನೇಮಕಗೊಳಿಸಿ ಬಿಜೆಪಿ ಮಂಡಲದ ಅಧ್ಯಕ್ಷ ಶ್ರೀನಿವಾರ ರಾವ್ ಆದೇಶ ಹೊರಡಿಸಿದ್ದಾರೆ.
ಉಪಾಧ್ಯಕ್ಷರಾಗಿ ಅಶೋಕ್ ಜೈನ್ ತೋಟತ್ತಾಡಿ, ಜೋಬಿ ಜೋಸೆಫ್ ಮಾಚಾರು, ಬದ್ರುದ್ದೀನ್ ಕಾಜೂರು, ರಿಚಾರ್ಡ್ ಗೋವಿಸ್ ಪಡಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ವಿಶಾಲ್ ಹೆಗ್ಡೆ ಕಲ್ಮಂಜ, ಪ್ರಿನ್ಸ್ ತೋಮಸ್ ತೋಟತ್ತಾಡಿ, ಕಾರ್ಯದರ್ಶಿಯಾಗಿ ಅಶ್ರಫ್ ಲಾಯಿಲ, ಜುಬಿನ್ ಕುಕ್ರಾಡಿ, ವಿಲಿಯಂ ಮಿನೆಜಸ್ ವೇಣೂರು, ಸಾಫಿನ್ ಕೊಯ್ಯರು, ಕೋಶಾಧಿಕಾರಿಯಾಗಿ ಅರುಣ್ ಕುಮಾರ್ ಇಂದಲಿಕೆ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರ ಸಂಕ್ಷಿಪ್ತ ಪರಿಚಯ: ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಪಿ.ಸಿ ಸೆಬಾಸ್ಟಿಯನ್ ಅವರು ಖ್ಯಾತ ಉದ್ಯಮಿ ಹಾಗೂ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಅವರು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ದಲ್ಲಿ ಉಪಾಧ್ಯಕ್ಷರಾಗಿ, ಕರ್ನಾಟಕ ಸೀರೋಮಲಬಾರ್ ಕ್ಯಾಥೊಲಿಕ್ ಅಸೊಸಿಯೇಶನ್ (ಕೆಎಸ್‌ಎಮ್‌ಸಿಎ) ಇದರ ಸಾರ್ವಜನಿಕ ಸಂರ್ಕಾಧಿಕಾರಿಯಾಗಿ, ಬೆಳ್ತಂಗಡಿ ಧರ್ಮಕೇಂದ್ರದ ಪಾಲನಾ ಮಂಡಳಿಯ ಸದಸ್ಯರಾಗಿ, ಕೋವಿಡ್ ಸಮಯ ಮಾನವ ಸ್ಪಂದನ ಕೋವಿಡ್ ವಾರಿಯರ್ಸ್ ತಂಡದ ಅಧ್ಯಕ್ಷರಾಗಿ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಬೆಳ್ತಂಗಡಿ ಇದರ ಅಧ್ಯಕ್ಷರಾಗಿ, ಪಾಲನಾ ಸಮಿತಿ ಸದಸ್ಯರಾಗಿ, ಸೇರಿದಂತೆ ವಿವಿಧ ಸಾಮಾಜಿಕ ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರಾಗಿದ್ದಾರೆ.