ಹೆದ್ದಾರಿ ರಸ್ತೆ ಕಾಮಗಾರಿಯ ಅವ್ಯವಸ್ಥೆ ಮಡಂತ್ಯಾರು-ಪುಂಜಾಲಕಟ್ಟೆ ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘದ ನೇತೃತ್ವದಲ್ಲಿ ಸಭೆ

0

ಮಡಂತ್ಯಾರು: ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘ ಇದರ ನೇತೃತ್ವದಲ್ಲಿ ಮಡಂತ್ಯಾರು-ಪುಂಜಾಲಕಟ್ಟೆ ಗ್ರಾಮ ಪಂಚಾಯತ್ ಮಡಂತ್ಯಾರು, ಗ್ರಾಮ ಪಂಚಾಯತ್ ಮಾಲಾಡಿ
ಇದರ ಸಹಕಾರದೊಂದಿಗೆ ಹೆದ್ದಾರಿ ರಸ್ತೆ ಕಾಮಗಾರಿಯ ಅವ್ಯವಸ್ಥೆಯನ್ನು ಶೀರ್ಘವೇ ಸರಿಪಡಿಸುವ ಕುರಿತು ಹೆದ್ದಾರಿ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯು ಮಾ.18ರಂದು ವಿಶ್ವಕರ್ಮ ಸಭಾಭವನ ಬಸವನಗುಡಿ ಪುಂಜಾಲಕಟ್ಟೆಯಲ್ಲಿ ನಡೆಯಿತು.

ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ವರ್ತಕ ಬಂಧುಗಳು, ಸಾರ್ವಜನಿಕ ಬಂಧುಗಳು ಈ ಸಭೆಯಲ್ಲಿ ಭಾಗವಹಿಸಿ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.

ಸಾರ್ವಜನಿಕರ ಅಹವಾಲುಗಳಿಗೆ ಸಂಬಂಧ ಪಟ್ಟವರಿಂದ ಸೂಕ್ತ ಪರಿಹಾರಗಳನ್ನು ಪಡೆದುಕೊಳ್ಳಲು ಹೆದ್ದಾರಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ ತಯಾರಿಸಲಾಹಿತು.ಈ ಸಂದರ್ಭದಲ್ಲಿ ಹೋರಾಟ ಸಮಿತಿ ರಚಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ದೂಳು ಏಳದಂತೆ ನೀರು ಹಾಯಿಸಲು, ಸಮರ್ಪಕ ಚರಂಡಿ ನಿರ್ಮಾಣ, ರಸ್ತೆ ಇಕ್ಕೆಲದಲ್ಲಿರುವ ಮರ ತೆರವು, ವಿದ್ಯುತ್ ಕಂಬ ತೆರವು, ಪಟ್ಟಾ ಜಾಗದ ಮಾಹಿತಿ ಸಮರ್ಪಕ ವಾಗಿ ನೀಡುವ ಬಗ್ಗೆ ನಿರ್ಣಯಗಳನ್ನು ಮಾಡಲಾಹಿತು.

ಈ ಸಂದರ್ಭದಲ್ಲಿ ವಾಣಿಜ್ಯ, ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಮತ್ತು ಸರ್ವಸದಸ್ಯರು, ಗ್ರಾಮ ಪಂಚಾಯತ್ ಮಾಲಾಡಿ ಅಧ್ಯಕ್ಷ ಪುನೀತ್ ಕುಮಾರ್ ಮತ್ತು ಸರ್ವಸದಸ್ಯರು, ಗ್ರಾಮ ಪಂಚಾಯತ್ ಮಡಂತ್ಯಾರು ಅಧ್ಯಕ್ಷೆ ರೂಪ ಎ ಎಸ್ ಮತ್ತು ಸರ್ವಸದಸ್ಯರು, ಉದ್ದಿಮೆದಾರರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here