ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ

0

ಮಲೆಬೆಟ್ಟು: ಕೊಯ್ಯೂರು ಗ್ರಾಮದ ಬದಿನಡೆ ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.8ರಿಂದ 11ರವರೆಗೆ ನಡೆಯಲಿದೆ.

ಫೆ. 8ರಂದು ದೇವತಾ ಪ್ರಾರ್ಥನೆ, ಶ್ರೀ ಗಣಯಾಗ, ತೋರಣ ಮುಹೂರ್ತ, ಶ್ರೀ ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಪ್ರಸನ್ನ ಪೂಜೆ, ರಾತ್ರಿ 7ರಿಂದ ಶ್ರೀ ಪಂಚದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಸಂಘ ಆದೂರು ಪೇರಾಲ್ ಮತ್ತು ಅತಿಥಿ ಕಲಾವಿದರಿಂದ ಯಕ್ಷಗಾನ ಸುಧನ್ವ ಮೋಕ್ಷ, ರಾತ್ರಿ 8.30ರಿಂದ ಶ್ರೀ ರಂಗಪೂಜೆ, ಶ್ರೀ ದೇವಿ ಉತ್ಸವ, ನಿತ್ಯಬಲಿ ನಡೆಯಿತು.

ಫೆ.9 ರಂದು ಬೆಳಿಗ್ಗೆ 9ರಿಂದ ಶ್ರೀದೇವಿ ಉತ್ಸವ, ದರ್ಶನ ಬಲಿ, ಕಲಶಾಭಿಷೇಕ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ರಾತ್ರಿ 7ರಿಂದ ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ 8.30ರಿಂದ ಶ್ರೀದೇವಿ ಉತ್ಸವ, ಭೂತಬಲಿ, ಶಯನೋತ್ಸವ, ಕವಾಟ ಬಂಧನ, ಫೆ.10 ರಂದು ಕವಾಟ ಉದ್ಘಾಟನಾ, ಕಲಶಾಭಿಷೇಕ, ಪ್ರಸನ್ನ ಪೂಜೆ, ಚೂರ್ಣೋತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ 12.30ರಿಂದ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ 5ರಿಂದ ಕಳೆಂಜ ಮೂಲಸ್ಥಾನದಿಂದ ಭಂಡಾರದ ಆಗಮನ, ರಾತ್ರಿ 7ರಿಂದ ಶ್ರೀ ದೇವಿಯ ಉತ್ಸವ, ಕೆರೆಕಟ್ಟೆ ಪೂಜೆ, ಅವಭ್ರತ, ಧ್ವಜಾವರೋಹಣ, ಪ್ರಸನ್ನ ಪೂಜೆ, ಸ.ಉ.ಹಿ.ಪ್ರಾ.ಶಾಲೆ ಕೊಯ್ಯೂರು ಕಸಬಾ ಮಲೆಬೆಟ್ಟು ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ, ರಾತ್ರಿ 8ರಿಂದ ಡಾ. ಶ್ರುತಿ ಕಾಂತಾಜೆ ಇವರಿಂದ ಭಕ್ತಿ ಭಾವ ಲಹರಿ, ರಾತ್ರಿ 12ರಿಂದ ಶ್ರೀ ಧರ್ಮದೈವಗಳ ನೇಮೋತ್ಸವ, ಶ್ರೀ ಧರ್ಮದೈವ ವಾರಾಹಿ, ಶ್ರೀ ಧೂಮಾವತಿ ನೇಮೋತ್ಸವ, ಶ್ರೀ ಕೊಡಮಣಿತ್ತಾಯ ಸಹಿತ ಧರ್ಮ ದೈವಗಳ ನೇಮೋತ್ಸವ ಫೆ.11 ರಂದು ಬೆಳಿಗ್ಗೆ 6ಕ್ಕೆ ಶ್ರೀ ಭಂಡಾರದ ನಿರ್ಗಮನ, ಸಂಪ್ರೋಕ್ಷಣೆ, ಪ್ರಸನ್ನ ಪೂಜೆ, ರಾತ್ರಿ 8 ರಿಂದ ಮೂಲಸ್ಥಾನ ಕಳೆಂಜ ಗುತ್ತು ದೈವಸ್ಥಾನದಲ್ಲಿ ಧರ್ಮದೈವ ವಾರಾಹಿ ನೇಮೋತ್ಸವ, ಕಲ್ಕುಡ, ಕಲ್ಲುರ್ಟಿ ಗುಳಿಗ ನೇಮೋತ್ಸವ, ಫೆ.12 ರಂದು ಶ್ರೀ ಕಲಶಾಭಿಷೇಕ, ಕಳೆಂಜದಲ್ಲಿ, ಪ್ರಸನ್ನ ಪೂಜೆ ಫೆ.13ರಂದು ಮಧ್ಯಾಹ್ನ 12 ರಿಂದ ದೇವಾಲಯದಲ್ಲಿ ಸಂಕ್ರಾಂತಿ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

p>

LEAVE A REPLY

Please enter your comment!
Please enter your name here