


ಬಂದಾರು : ಜ.27ರಂದು ಶಿವ ಫ್ರೆಂಡ್ಸ್ ಕುರಾಯ ಖಂಡಿಗ ಬಂದಾರು ಗ್ರಾಮ ಬೆಳ್ತಂಗಡಿ ಇದರ ಆಶ್ರಯದಲ್ಲಿ 8ನೇ ವರ್ಷದ ವಲಯ ಮಟ್ಟದ 6 ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಕೆ.ವಿ.ಎಲ್ 2024 ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟ, ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಖಂಡಿಗ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚಿದಾನಂದ ರಾವ್ ಕೊಲ್ಲಾಜೆ ಇವರು ನೆರವೇರಿಸಿದರು.ಪ್ರಗತಿಪರ ಕೃಷಿಕರಾದ ಸುಂದರ ಗೌಡ ಖಂಡಿಗ ಇವರು ಸಭಾಧ್ಯಕ್ಷತೆ ವಹಿಸಿದ್ದರು.ಕಲ್ಲೇರಿ ಮೆಸ್ಕಾಂ ಪವರ್ ಮ್ಯಾನ್ ಸಂದೀಪ್ ಎಂ ಕ್ರೀಡಾಂಗಣ ಉದ್ಘಾಟನೆ ಮಾಡಿದರು.
ಮುಖ್ಯ ಅಥಿತಿಗಳಾದ ಮುಗೇರಡ್ಕ ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೊರ್ತೋಡಿ ಮಾಧವ ಗೌಡರವರು ಸಂಘದ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳುವ ಕಾರ್ಯಕ್ರಮ ಎಲ್ಲರೂ ಒಂದೇ ಮನಸ್ಸಿನಲ್ಲಿ ಇನ್ನಷ್ಟು ಸಮಾಜಮುಖಿ ಕೆಲಸದಲ್ಲಿ ಭಾಗವಹಿಸಿ ಶಿವಫ್ರೆಂಡ್ಸ್ ತಂಡವು ಸಮಾಜದಲ್ಲಿ ಇನ್ನಷ್ಟು ಉತ್ತಮ ಕಾರ್ಯದಲ್ಲಿ ತೊಡಗಿಕೊಂಡು ಬರಲಿ ಹಾಗೂ ಸಂಘದ ಬೆಳವಣಿಗೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ರಾಷ್ಟ ಮಟ್ಟದಲ್ಲಿ ಉತ್ತಮ ಅಡಿಕೆ ಕೃಷಿಕ ಪ್ರಶಸ್ತಿ ಪಡೆದ ಕಡಮ್ಮಾಜೆ ಫಾರ್ಮ್ಸ್ ನ ದೇವಿಪ್ರಸಾದ್ ಗೌಡ ಇವರು ಸನ್ಮಾನ ಸ್ವೀಕರಿಸಿ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿ ಜಿಲ್ಲೆ, ರಾಜ್ಯ, ರಾಷ್ಟ ಮಟ್ಟದಲ್ಲಿ ಪ್ರತಿನಿದಿಸುವ ಪ್ರತಿಭೆಗಳಿಗೆ ಅವರ ಮುಂದಿನ ಭವಿಷ್ಯಕ್ಕೂ ಪ್ರೋತ್ಸಾಹ ನೀಡುವ ಕೆಲಸವಾಗಬೇಕು.ಆವಾಗ ಪ್ರತಿಭೆಗೆ ತಕ್ಕ ಪ್ರತಿಫಲ ಮುಂದೆ ಖಂಡಿತ ಸಾದ್ಯವಿದೆ.ಹಾಗೂ ಕೃಷಿ, ತರಕಾರಿ ಬೆಳೆಯುವಲ್ಲಿ ರಾಸಾಯನಿಕ ಬಳಕೆ ಮಾಡದೇ ಸಾವಯವ ಕೃಷಿಯತ್ತ ಎಲ್ಲರ ಕೈಜೋಡಿಸಿದರೆ ಆರೋಗ್ಯಕರ ಜೀವನ ಮುನ್ನಡೆಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.


ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ ರವರು ಸಂಘದ ಸದಸ್ಯರಾಗಿ ಸರ್ವತೋಮುಖ ಬೆಳವಣಿಗೆಗೆ ಸಂಪೂರ್ಣ ಸಹಕಾರವಿತ್ತ ಸರ್ವರಿಗೂ ಅಭಿನಂದನೆ ಸಲ್ಲಿಸಿ ಶುಭಹಾರೈಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಪದ್ಮುಂಜ ಸಿಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಯುವ ಉದ್ಯಮಿ ಪ್ರಸಾದ್ ಕಡ್ತಿಲ, ಧರ್ಮಸ್ಥಳ ಪೊಲೀಸ್ ಠಾಣಾ ಉಪನಿರಿಕ್ಷಕರಾದ ಅನಿಲ್ ಕುಮಾರ್, ರುಕ್ಮಯ್ಯ ಪೂಜಾರಿ ಮೂರ್ತಾಜೆ, ಬಂದಾರು ಗ್ರಾಮ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಪರಮೇಶ್ವರಿ ಕೆ ಗೌಡ, ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಸುಚಿತ್ರ ಮುರ್ತಾಜೆ, ಬಂದಾರು ಗ್ರಾ.ಪo ಮಾಜಿ ಸದಸ್ಯರಾದ ಹರೀಶ್ ಗೌಡ ಪರಪ್ಪಾದೆ, ಪ್ರಗತಿಪರ ಕೃಷಿಕ ದಿನೇಶ್ ಗೌಡ ದಾಸರಕೋಡಿ, ಲೀಗ್ ವಾಲಿಬಾಲ್ ತಂಡದ ಮುರ್ತಾಜೆ ಬ್ರದರ್ಸ್ ಶರತ್ ಮುರ್ತಾಜೆ, ಯಜಮಾನ ಫ್ರೆoಡ್ಸ್ ಶೇಖರ ಗೌಡ ಚಾಕೋಟೆದಡಿ, ಆಶ್ರಯ ಫ್ರೆಂಡ್ಸ್ ಉದಯ ಕುರುಡಂಗೆ, ಪಿ.ಸಿ.ಅಟ್ಯಾಕರ್ಸ್ ಕುಶಾಲಪ್ಪ ಅತ್ಯರಖಂಡ, ಶಿವಸಾಯಿ ದಿನೇಶ್ ಗೌಡ, ಪ್ರಶಾಂತ್ ಗೌಡ ಪುತ್ತಿಲ, ಉಳ್ಳಾಲ್ತಿ ಫ್ರೆಂಡ್ಸ್ ಪ್ರಶಾಂತ್ ಗೌಡ ನಿರಂಬುಡ ಉಪಸ್ಥಿತರಿದ್ದರು.
ಅಡಿಕೆ ಕೃಷಿಯಲ್ಲಿ ರಾಷ್ಟ ಪ್ರಶಸ್ತಿ ಪಡೆದ ದೇವಿಪ್ರಸಾದ್ ಗೌಡ ಕಡಮ್ಮಾಜೆ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಮೈದಾನದ ಸ್ಥಳದಾನಿಗಳಾದ ಚೆಲುವಮ್ಮ, ಚೆನ್ನಮ್ಮ ಖಂಡಿಗ, ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾದ ಕು.ನಿತ್ಯಶ್ರೀ ಖಂಡಿಗ, ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಉಮೇಶ ಗೌಡ ಖಂಡಿಗ, ಹರೀಶ್ ಗೌಡ ದಾಸರಕೋಡಿ ಇವರುಗಳಿಗೆ ಸನ್ಮಾನಿಸಲಾಯಿತು.
ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟದಲ್ಲಿ ತುಳುನಾಡ ಯುನೈಟೆಡ್ ಎ ಪ್ರಥಮ, ಮಂಡೋನ್ಸ ಚಾಲೆಂಜೆರ್ಸ್ ದ್ವಿತೀಯ, ತುಳುನಾಡ ಯುನೈಟೆಡ್ ಸಿ ತೃತೀಯ, ಶಿವ ಫ್ರೆಂಡ್ಸ್ ಕುರಾಯ ಖಂಡಿಗ ಚತುರ್ಥ ಸ್ಥಾನವನ್ನು ತಣ್ಣದಾಗಿಸಿಕೊಂಡಿತು.ವಾಲಿಬಾಲ್ ಪಂದ್ಯಾಟದಲ್ಲಿ ಯಜಮಾನ ಫ್ರೆಂಡ್ಸ್ ಪ್ರಥಮ, ಪಿ.ಸಿ.ಅಟ್ಯಾಕರ್ಸ್ ದ್ವಿತೀಯ, ಮುರ್ತಾಜೆ ಬ್ರದರ್ಸ್ ತೃತೀಯ, ಉಲ್ಲಾಲ್ತಿ ಫ್ರೆಂಡ್ಸ್ ಚತುರ್ಥ, 5 ನೇ ಸ್ಥಾನ ಶಿವಸಾಯಿ ಹಾಗೂ 6 ನೇ ಸ್ಥಾನ ಆಶ್ರಯ ಫ್ರೆಂಡ್ಸ್ ಮುಡಿಗೆರಿಸಿಕೊಂಡಿತು.
ಕಾರ್ಯಕ್ರಮವನ್ನು ನಿರಂಜನ ಗೌಡ ನಡುಮಜಲು ಸ್ವಾಗತಿಸಿ, ಡೂoಬಯ್ಯ ಗೌಡ ಖಂಡಿಗ ಸನ್ಮಾನ ಪತ್ರ ವಾಚಿಸಿದರು.ಭರತೇಶ್ ನೆಲ್ಲಿದಕಂಡ ಕಾರ್ಯಕ್ರಮ ನಿರೂಪಿದರು.ನೆರೆದ ಕ್ರೀಡಾಭಿಮಾನಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯವು ನಡೆಯಿತು.








