ಕಾಯರ್ತಡ್ಕ: ದಿವ್ಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಾಯರ್ತಡ್ಕ ಇಲ್ಲಿ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಮೊದಲಿಗೆ ಶಾಲಾ ಮಕ್ಕಳಿಂದ ಪಥ ಸಂಚಲನ ನಡೆಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮನೋಜ್ ಇವರು ದ್ವಜರೋಹಣ ಮಾಡಿದರು.ಪ್ರಜಾಪ್ರಭುತ್ವವು ನಮ್ಮ ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ.ನಾವು ರಾಷ್ಟ್ರದ ಏಳಿಗೆ ಗಾಗಿ ನಮ್ಮ ಜಾತಿ ಮತ ಧರ್ಮ ಭಾಷೆಗಳನ್ನು ಬದಿಗಿಟ್ಟು ಒಂದೇ ಭಾವನೆಯಿಂದ ಶ್ರಮಿಸಬೇಕು.ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಭಾರತ ದೇಶದ ಏಳಿಗೆಗೆ ಭಾವೈಕ್ಯತೆ ಯಿಂದ ಒಗ್ಗೂಡಿ ದುಡಿಯೋಣ ಎಂದು ಈ ಸಂದರ್ಭದಲ್ಲಿ ನುಡಿದರು.
ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ದಿವ್ಯ ಮರಿಯಾ ಎಸ್ ಎಚ್. ಸಂವಿಧಾನದ ಮಹತ್ವದ ಕುರಿತು ಮಾತನಾಡಿದರು.
ಶಾಲಾ ಸಂಚಾಲಕಿ ಸಿಸ್ಟರ್ ಮೆರ್ಸಿ ಚೆರಿಯನ್ ಉಪಸ್ಥರಿದ್ದರು.ಶಾಲಾ ನಾಯಕಿ ಕುಮಾರಿ ಅನರ್ಘ್ಯ ಜಿ.ಕೆ ಅವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.ಕುಮಾರಿ ಆಡ್ಲಿನ್ ಗಣರಾಜ್ಯೋತ್ಸವದ ಮಹತ್ವ ಹಾಗೂ ಸಂವಿಧಾನದ ಕುರಿತು ಭಾಷಣ ಮಾಡಿದರು.ಶಿಕ್ಷಕ ಸುರೇಶ್ ಶೆಟ್ಟಿ ಅವರು ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ಪುಷ್ಪ ಇವರು ಸ್ವಾಗತಿಸಿ, ಮುಖ್ಯ ಶಿಕ್ಷಕಿಯವರು ವಂದಿಸಿದರು.