ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ವೇಣೂರು ವಲಯದ ಕರಿಮಣೇಲು ಎ ಮತ್ತು ಬಿ ಒಕ್ಕೂಟಗಳ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮವು ದೇಲಂಪುರೀ ದೇವಸ್ಥಾನದ ಸಭಾಂಗಣದಲ್ಲಿ ದೋಗು ನಾಯ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.
ದೇಲಂಪುರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸರಕಾರವು ಅನುಷ್ಠಾನ ಮಾಡುವಂತಹ ಪ್ರತಿಯೊಂದು ಕಾರ್ಯಕ್ರಮವನ್ನು ಡಾ.ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮಮಟ್ಟದಲ್ಲಿ ಪ್ರತಿಯೊಂದು ಕಾರ್ಯಕ್ರಮವನ್ನು ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿರುವುದು ಅವಿಸ್ಮರಣೀಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆಯ ನಿರ್ದೇಶಕ ಮಹಾಬಲ ಕುಲಾಲ್ ನಿಕಟಪೂರ್ವ ಪದಾಧಿಕಾರಿಗಳು ಇಂದು ನಿರ್ಗಮನಗೊಂಡು ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿ ಮುಂದಿನ ದಿನಗಳಲ್ಲಿಯೂ ನಿಮ್ಮ ಒಕ್ಕೂಟದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ಶುಭ ಹಾರೈಸಿದರು.ಯೋಜನೆ ಬರುವ ಮೊದಲು ಇದ್ದ ಪರಿಸ್ಥಿತಿಯೂ ಹಾಗೂ ಈಗಿನ ಪರಿಸ್ಥಿತಿಯ ಬಗ್ಗೆ ವ್ಯತ್ಯಾಸವನ್ನು ತಿಳಿಸಿದರು.
ವೇದಿಕೆಯಲ್ಲಿ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಜಯರಾಂ ಶೆಟ್ಟಿ ಖಂಡಿಗ, ಮಹೇಶ್ ಭಟ್ ಕೃಷಿಕರು, ಗ್ರಾಮ ಸಮಿತಿ ಅಧ್ಯಕ್ಷ ರಾಮದಾಸ್ ನಾಯಕ್, ಮಹಾದೇವ ಮಹಾಗಣಪತಿ ದೇವಸ್ಥಾನದ ಕುಣಿತ ಭಜನಾ ಕ್ಷೇತ್ರದ ಅಧ್ಯಕ್ಷ ಜಗದೀಶ್ ನಾಯಕ್ ಮೂಂಕಡಿ, ಗಿರಿಜಾ ಭಟ್, ತಾಲೂಕಿನ ಯೋಜನಾಧಿಕಾರಿ ದಯಾನಂದ ಪಿ.ಪೂಜಾರಿ ಉಪಸ್ಥರಿದ್ದರು.
ಮೇಲ್ವಿಚಾರಕಿ ಶಾಲಿನಿ ಸ್ವಾಗತಿಸಿದರು.ಸೇವಾಪ್ರತಿನಿಧಿ ಶೋಭಾ ಒಕ್ಕೂಟದ ವರದಿ ಮಂಡನೆ ಮಾಡಿದರು.ಪೂಜಾ ಸಮಿತಿ ಉಪಾಧ್ಯಕ್ಷರು ಅರುಣ್ ಹೆಗ್ಡೆ ಧನ್ಯವಾದವಿತ್ತರು.