ಮಡಂತ್ಯಾರು: ಪಾರಿಂಕಿ ಗ್ರಾಮದ ಮಾರಿಕಾಂಬ ನಗರದ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ಜ.9ರಂದು ಜಾತ್ರೋತ್ಸವ ಹಾಗೂ ಪರಿವಾರ ದೈವಗಲಿಗೆ ನೇಮೋತ್ಸವ ನಡೆಯಿತು.
ಬೆಳಿಗ್ಗೆ ಸಾಮೂಹಿಕ ಶ್ರೀ ದೇವರ ಪ್ರಾರ್ಥನೆಯೊಂದಿಗೆ ತೋರಣ ಮುಹೂರ್ತ ಪುಣ್ಯಹ ಪಂಚಗವ್ಯ ಅಷ್ಟ ದ್ರವ್ಯ ಗಣ ಹೋಮ ನವಕಲಶ ಪ್ರತಿಷ್ಠೆ ಪ್ರಧಾನ ಹೋಮ ಮತ್ತು ಗ್ರಾಮ ದೈವಗಳಿಗೆ ತೋರಣ ಮುಹೂರ್ತ ಸಾರಿ ಪ್ರಶ್ನೆ ನವ ಕಳಸ ಅಭಿಷೇಕ, ವಿಶೇಷ ಸರ್ವಲಂಕಾರ ಸಹಿತ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಮೂಡಾ ಯೂರು ಗುತ್ತಿನಿಂದ ಗ್ರಾಮದೈವ ಕೊಡಂಗೆತ್ತಾಯ ಮತ್ತು ಇತರ ಪರಿವಾರ ದೈವಗಳ ಬಂಡಾರ ಅದ್ದೂರಿ ಮೆರವಣಿಗೆಯೊಂದಿಗೆ ದೇವಿ ಸನ್ನಿಧಿಗೆ ಆಗಮಿಸಿ ಗದ್ದಿಗೆ ಪೂಜೆ ನೇಮೋತ್ಸವ ದೈವ ದೇವರುಗಳ ಭೇಟಿ ನಡೆಯಿತು.ನಂತರ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶೃತಿ ಆರ್ಟ್ಸ್ ಕಾವಲಕಟ್ಟೆ ಇವರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಿತು.ದೇವಾಲಯದ ಅನುವಂಶಿಕ ಆಡಳಿತ ಮುಕ್ತೇಶ್ವರದ ಕೆ ಸನತ್ ಕುಮಾರ್ ಪಡಿವಾಲ್ ಮತ್ತು ಕುಟುಂಬಸ್ಥರು, ಕಾರ್ಯಧ್ಯಕ್ಷರಾದ ಡಾಕ್ಟರ್ ಕೆ ಎಸ್ ಬಲ್ಲಾಳ್ ಜಾತ್ರಾ ಸಮಿತಿಯ ಸದಸ್ಯರಾದ ರತ್ನಾಕರ್ ಶೆಟ್ಟಿ ಮೂಡಯೂರು, ನವೀನ್ ಪಿ ಯಾದವ್, ಲೋಕೇಶ್ ಆಚಾರ್ಯ, ಜಯಂತ್ ಶೆಟ್ಟಿ, ಕಾಂತಪ್ಪ ಗೌಡ, ಪ್ರವೀಣ್ ಕುಮಾರ್, ಸುಂದರ ಪೂಜಾರಿ, ಅರ್ಚಕರಾದ ರಮೇಶ್ ಭಟ್, ಯೋಗೀಶ್ ಹೆಗ್ಡೆ, ಜಾತ್ರಾ ಉಪ ಸಮಿತಿಯ ಸದಸ್ಯರಾದ ಗಂಗಾಧರ್ ಪೂಜಾರಿ, ಬಾಬು ಆಚಾರ್ಯ, ಸುಂದರ ಮೂಲ್ಯ, ಆನಂದ ಮೂಲ್ಯ, ಸತೀಶ್ ಮೂಲ್ಯ, ದಿನೇಶ್ ಮೂಲ್ಯ, ಮೋಹನ್ ದೊಟ ಹಾಗೂ ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.