ಬೆಳ್ತಂಗಡಿ : ನ್ಯಾಯತರ್ಪು ಗ್ರಾಮದ ಪರಿಮ ಜಾರಿಗೆಬೈಲು ಬದ್ರಿಯಾ ಹಿದಾಯತುಲ್ ಇಸ್ಲಾಂ ಮದರಸ ಸಮಿತಿ, ಹಾಗೂ ಗಲ್ಫ್ ಸಮಿತಿ ಇದರ ವತಿಯಿಂದ ಜ.7 ರಂದು ಪರಿಮ ಮದರಸದ ವಠಾರದಲ್ಲಿ ಸಂಜೆ ಗಂಟೆ 5 ರಿಂದ ಏಕದಿನ ಮತ ಪ್ರಭಾಷಣ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಅಬ್ದುಲ್ ಲತೀಫ್ ಪರಿಮ ಹೇಳಿದರು.
ಅವರು ಜ.2 ರಂದು ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕಾರ್ಯಕ್ರಮದ ಉದ್ಘಾಟನೆ ಮತ್ತು ದುವಾಶೀರ್ವಚನವನ್ನು ಸಮಸ್ತ ಕೇರಳ ಜಂ-ಇಯತುಲ್ ಉಲಮಾ ಕೇಂದ್ರ ಮುಶಾವರ ಇದರ ಅಧ್ಯಕ್ಷ ಸಯ್ಯದುಲ್ ಉಲಮಾ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಞಳ್ ನೆರವೇರಿಸಲಿದ್ದಾರೆ.
ಅಧ್ಯಕ್ಷತೆಯನ್ನು ಸೈಯ್ಯದ್ ಝನುಲ್ ಅಭಿದೀನ್ ತಂಙಳ್ ಬೆಳ್ತಂಗಡಿ ವಹಿಸಲಿದ್ದಾರೆ.ಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ಆತೂರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಚಿವರಾದ ಜಮೀರ್ ಅಹಮದ್ ಖಾನ್, ಮಂಗಳೂರು ಖಾಝಿಗಳಾದ ತ್ವಾಖಾ ಅಹ್ಮದ್ ಮುಸ್ಲಿಯಾರ್, ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್-ಖಾಸಿಮಿ ಬಂಬ್ರಾಣ, ಉಸ್ಮಾನ್ ಫೈಝಿ ತೋಡಾರು, ವಳಚ್ಚಿಲ್ ಖತೀಬರಾದ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿಗಳಾದ ಕೆ.ಎ.ಹಿದಾಯತುಲ್ಲ, ಶಾಸಕರಾದ ಎನ್.ಎ.ಹಾರಿಶ್, ವಿಧಾನ ಪರಿಷತ್ ಶಾಸಕ ಬಿ.ಎಮ್ ಫಾರೂಕ್, ಇನಾಯತ್ ಆಲಿ, ಶಾಹುಲ್ ಹಮೀದ್ ಕೆ.ಕೆ., ಅಬ್ದುಲ್ ಆಝೀಝ್ ದಾರಿಮಿ, ಎಸ್.ಬಿ. ದಾರಿಮಿ, ಹುಸೈನ್ ದಾರಿಮಿ, ಇರ್ಷಾದ್ ದಾರಿಮಿ ಮಿತ್ತಬೈಲು, ಬಿ.ಎ.ನಝೀರ್ ಬೆಳ್ತಂಗಡಿ, ಉದ್ಯಮಿಗಳಾದ ಲತೀಫ್ ಗುರುಪುರ, ಅಬ್ದುಲ್ ಹಮೀದ್ ಸುಳ್ಯ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಯಾಕೂಬ್.ಎಸ್.ಕೊಯ್ಯೂರು, 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಹಾಗೂ ಕಾರ್ಯಕ್ರಮದಲ್ಲಿ ಅನೇಕ ಉಲಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆಂದು ಮತ್ತು ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸದರ್ ಮುಅಲ್ಲಿಮರಾದ ಅಬ್ದುಲ್ ಅಝೀಝ್ ಅಶ್ಶಾಫಿ, ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಪರಿಮ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಸಿಟಿ ಲ್ಯಾಂಡ್, ಸ್ವಾಗತ ಸಮಿತಿ ಅಧ್ಯಕ್ಷ ರಶೀದ್ ಪರಿಮ, ಸದಸ್ಯರಾದ ಉಸ್ಮಾನ್ ಮುಂಡಾಜೆ, ಹಾಜರಿದ್ದರು.