ಶಿಬರಾಜೆ: ಜೇಸಿಐ ಕೊಕ್ಕಡ ಕಪಿಲಾ ಘಟಕದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ 4ನೇ ವರ್ಷದ ಪದಗ್ರಹಣ ಸಮಾರಂಭ ಜ.1 ರಂದು ಗ್ರಾಮಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಶಿಬಾರಾಜೆ ಪಾದೆ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ಜಿತೇಶ್ ಎಲ್ ಪಿರೇರಾ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗುರು ಯಂ.ಪಿ, ಜೆ.ಎಫ್.ಎಂ ಶಂಕರ್ ರಾವ್, ಜೇಸಿ ಶ್ರೀಧರ್ ರಾವ್, ಜೇಸಿ ವಿಕ್ಟರ್ ಸುವಾರಿಸ್, ಜೇಸಿ ದೀಪ, ಜೆಜೆಸಿ ಪ್ರತೀಕ್ಷಾ ಕೆ ಶೆಟ್ಟಿ ಉಪಸ್ಥಿತರಿದ್ದರು.
2024 ರ ನೂತನ ಅಧ್ಯಕ್ಷರಾಗಿ ಸಂತೋಷ್ ಜೈನ್, ಕಾರ್ಯದರ್ಶಿಯಾಗಿ ಅಕ್ಷತ್ ರೈ, ಮಹಿಳಾ ಜೇಸಿ ಅಧ್ಯಕ್ಷರಾಗಿ ಶೋಭಾ ಪಿ, ಜೂನಿಯರ್ ಜೇಸಿ ಅಧ್ಯಕ್ಷರಾಗಿ ಹರ್ಷಿತ್, ಜೇಸಿ ಲಿಟಲ್ ವಿಭಾಗದ ಅಧ್ಯಕ್ಷರಾಗಿ ವಿವಿಯನ್ ಸುವಾರಿಸ್ ಪದಗ್ರಹಣ ಸ್ವೀಕರಿಸಿದರು.
ಪದಗ್ರಹಣ ಸ್ವೀಕಾರದ ಬಳಿಕ ನೂತನ ಅಧ್ಯಕ್ಷರಾದ ಸಂತೋಷ್ ಜೈನ್ ಮಾತನಾಡಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಪೂರ್ವ ಅಧ್ಯಕ್ಷರ ಮಾದರಿಯಲ್ಲೇ ಜೇಸಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬರುತ್ತೇನೆ ಎಂದು ತಿಳಿಸಿದರು.
ಜೆ.ಎಫ್.ಎಂ ಶಂಕರ್ ರವರು ಮಾತನಾಡಿ ಶಿಬರಾಜೆ ಪಾದೆಯಲ್ಲಿ ಜೇಸಿ ಪದಗ್ರಹಣ ಕಾರ್ಯಕ್ರಮಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿರುವುದು ಬಹಳ ವಿಶೇಷ ಸೇರಿರುವ ಜನರಲ್ಲಿಯೂ ಜೇಸಿ ಬಗ್ಗೆ ಅಭಿರುಚಿ ಮೂಡಲಿ ಎಂದು ಹೇಳಿ ಜೇಸಿ ಕೊಕ್ಕಡ ಕಪಿಲಾ ಘಟಕ ತತ್ವ ಆದರ್ಶಗಳನ್ನು ಪಾಲಿಸುದರಲ್ಲಿ ಎತ್ತಿದ ಕೈ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುರು ಯಂ.ಪಿ ಮಾತನಾಡಿ ಇದೆ ಊರಿನವನಾಗಿದ್ದುಕೊಂಡು ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದ ನನಗೆ ಫಲ ತಾಂಬೂಲವಿತ್ತು ಆಮಂತ್ರಣ ಪತ್ರಿಕೆ ನೀಡಿದ ಪರಿಗೆ ನಾನು ತುಂಬಾ ಆಭಾರಿ.ಜೇಸಿ ಹಣವಂತರಾಗುವುದು ಹೇಗೆ, ಗುಣವಂತರಾಗುವುದು ಹೇಗೆ, ಮಾನವರಾಗುವುದು ಹೇಗೆ ಎಂದು ಕಳಿಸಿ ಕೊಡುತ್ತದೆ.ಜೇಸಿ ಯಲ್ಲಿ ಒಳ್ಳೊಳ್ಳೆ ಜ್ಞಾನಿಗಳು ಸಿಗುತ್ತಾರೆ ಅಂತವರ ನಿರಂತರ ಸಂಪರ್ಕದಿಂದ ಜೇಸಿಯಲ್ಲಿ ಉತ್ತಮ ಕೆಲಸವನ್ನು ನಿರ್ವಹಿಸಲು ಸಾಧ್ಯ ಎಂದು ತಿಳಿಸಿದರು.
ಸಭೆಯಲ್ಲಿ ನಿವೃತ ಅಧ್ಯಾಪಕರಾದ ತಿರುಮಲೇಶ್ವರ ಭಟ್ ಅರಸಿನಮಕ್ಕಿ ಅವರನ್ನು ಸನ್ಮಾನಿಸಲಾಯಿತು.
ಆದ್ಯ, ದಕ್ಷ, ಮನಸ್ವಿ ಪ್ರಾರ್ಥಿಸಿ, ಜಿತೇಶ್ ಎಲ್ ಪಿರೇರಾ ಸ್ವಾಗತಿಸಿ, ಪ್ರಿಯರವರು ನಿರೂಪಿಸಿ, ಅಕ್ಷಯ್ ರೈ ಧನ್ಯವಾದವಿತ್ತರು.