ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯ ಗೌರವ ಲಭಿಸಿದ್ದು ಕಾಂಬೋಡಿಯಾ ದೇಶದಲ್ಲಿ ಪ್ರಶಸ್ತಿ ಸ್ವೀಕರಿಸಿ ಸ್ವದೇಶಕ್ಕೆ ಹಿಂದಿರುಗಿದ ಟ್ರಸ್ಟ್ ನ ಸಂಚಾಲಕರು,ಉಜಿರೆ ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈಯವರನ್ನು ಉಜಿರೆಯಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್ ರವರು ಗೌರವಿಸಿ, ಅಭಿನಂದಿಸಿದರು.
ಜಾಗತಿಕ ಸಾಧನೆಗೈದ ಕರ್ನಾಟಕದ ಅಪರೂಪದ ಸಾಧಕರಿಗೆ ಹಾಗೂ ಸಂಘ ಸಂಸ್ಥೆಗೆ ನೀಡುವ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್-2023″ ಪ್ರಶಸ್ತಿಯನ್ನು ಕಾಂಬೋಡಿಯಾ ದೇಶದ ಅಂಕೋರ್ ಮಿರಾಕಲ್ ರೆಸಾರ್ಟ್,ಸಿಯಾಮ್ ರೀಪ್ ಸಭಾಂಗಣದಲ್ಲಿ ರಾಜೇಶ್ ಪೈ ಯವರು ಸ್ವೀಕರಿಸಿದ್ದರು.
ಈ ಸಂದರ್ಭದಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ಧನ್, ತಾ.ಪಂ ಮಾಜಿ ಸದಸ್ಯ ಶಶಿಧರ ಎಂ ಕಲ್ಮಂಜ, ಕಲ್ಮಂಜ ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀಧರ್ ಎಂ, ಪ್ರಮುಖರಾದ ರಾಘವೇಂದ್ರ ಎಂ, ತಾರೇಶ್ ದೇವಾಡಿಗ ಉಜಿರೆ ಉಪಸ್ಥಿತರಿದ್ದರು.