ಬುರೂಜ್ ಶಾಲೆ: ಸಿವಿಲ್ ಸರ್ವಿಸ್ ಎಕ್ಸಾಂ ಓರಿಯಂಟೇಶನ್

0

ಪುಂಜಾಲಕಟ್ಟೆ: ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ರಝಾನಗರ ದಲ್ಲಿ ಮೀಫ್ ದ.ಕ.ಮತ್ತು ಉಡುಪಿ ಜಿಲ್ಲೆ, ACE IAS ಅಕಾಡೆಮಿ ಮಂಗಳೂರು ಜಂಟಿ ನೇತ್ವತ್ವದಲ್ಲಿ ನಡೆದ ತರಬೇತಿ ಕಾರ್ಯಗಾರದಲ್ಲಿ ಬುರೂಜ್ ಸಂಸ್ಥೆಯ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾ ,ಮೀಫ್ ಸಂಸ್ಥೆಯ ಆಡಳಿತಾತ್ಮಕ ಕಾರ್ಯದಶಿಯಾದ ಶ್ರೀ ಅನ್ವರ್ ಗೂಡಿನ ಬಳಿ, ಜನರಲ್ ಸೆಕ್ರೆಟರಿ ರಿಯಾಝ್ ಕಣ್ಣೂರು, ಖ್ಯಾತ ಸಮಾಜ ಸೇವಕಿ ಶಬಾನಾ ಮನ್ಸೂರ್, ಕಾವಳ ಮೂಡೂರು ಕೋ ಆಪರೇಟಿವ್ ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ನಸೀಮ ಬಾನು, ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್ ಮತ್ತು ವಿಮಲಾರವರು ಉಪಸ್ಥಿತರಿದ್ದರು.

ತರಬೇತುದಾರರು ಸರ್ ಸಯ್ಯದ್ ಸಾದತ್ ಪಾಷರವರು ಫ್ರೌಡಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಕೇಂದ್ರಗಳ ಬಗ್ಗೆ ಸವಿಸ್ತರವಾದ ಮಾಹಿತಿ ನೀಡಿದರು.

ಎರಡನೇ ಅಧಿವೇಶನದಲ್ಲಿ ಸಂಪನ್ಮೂಲ ವ್ಯಕ್ತಿಯಾದ ರಫೀಕ್ ಮಾಸ್ಟರ್ ರವರು ಮೊದಲಿಗೆ ಬುರೂಜ್ ಸಂಸ್ಥೆ ಕ್ರೀಡೆ, ಕರಾಟೆ, ಸಾಂಸ್ಕೃತಿಕ ಕಾರ್ಯದಲ್ಲಿ ಉತ್ತಮ ಸಾಧನೆ ಮಾಡಿದೆ.ಇಲ್ಲಿಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನೀಡುವುದರಲ್ಲಿ ಸಫಲರಾಗಿದ್ದಾರೆ ಎಂಬ ಮಾತಿನೊಂದಿಗೆ ಆರಂಭಿಸಿ,ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಉತ್ತಮ ಪ್ರೇರಣೆ ನೀಡಿದರು.

ವಿದ್ಯಾರ್ಥಿನಿಯರಾದ ಸುಹಾನ ಫಾತಿಮ ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು.ಪಾತಿಮತ್ ರೈಸಾ ವಂದಿಸಿದರು. ಪಾತಿಮತ್ ಮಲೀಹಾ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here