ಬೆಳ್ತಂಗಡಿ: ಮೂಲತಃ ಮುಡಿಪ್ಪು ತಲೆಕ್ಕಿನಿವಾಸಿ, ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ಬದ್ರಿಯಾ ಜುಮ್ಮಾ ಮಸ್ಜಿದ್ ಸನಿಹದಲ್ಲಿ ನೆಲೆಸಿದ್ದ, ಹಿರಿಯ ಅಡಿಕೆ ವ್ಯಾಪಾರಿ ಟಿ ಉಮರಬ್ಬ (70) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನ.30 ರಂದು ನಿಧನರಾದರು.
ಮೃತರು ಬದ್ರಿಯಾ ಜುಮ್ಮಾ ಮಸ್ಜಿದ್ ಸೋಮಂತಡ್ಕ ಇಲ್ಲಿನ ಆಡಳಿತ ಸಮಿತಿ ಮತ್ತು ಕುತುಬಿಯತ್ ಸಮಿತಿಯಲ್ಲಿ ದೀರ್ಘ ಕಾಲ ಪದಾಧಿಕಾರಿಯಾಗಿದ್ದು, ನಿಡಿಗಲ್ ಮಸ್ಜಿದ್ ನಿರ್ಮಾಣವಾದ ಬಳಿಕ ಅಲ್ಲಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸೇವೆ ಸಲ್ಲಿಸಿದ್ದರು. ಅಡಿಕೆ ವ್ಯಾಪಾರಿಯಾಗಿ ತಾಲೂಕಿನಾಧ್ಯಂತ ಹೆಸರುವಾಸಿಯಾಗಿದ್ದರು.
ಜೊತೆಗೆ ಅಡುಗೆ ಪಾಕ ತಜ್ಞರಾಗಿಯೂ ಪ್ರಸಿದ್ಧರಾಗಿದ್ದರು. ಮೃತರು ಪತ್ನಿ ಐಸಮ್ಮ, ಮಕ್ಕಳಾದ ಮೊಯಿದಿನ್‌ಕುಂಞಿ(ಹಮೀದ್), ಮುಹಮ್ಮದ್ ಶರೀಫ್, ಝಕರಿಯಾ, ಫಾತಿಮಾ ಮತ್ತು ರುಕಿಯಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.ಮೃತದೇಹವನ್ನು ಮುಡಿಪ್ಪು ತಲೆಕ್ಕಿಯಲ್ಲಿ ಅವರ ಕುಟುಂಬ ವರ್ಗದವರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ರಾತ್ರಿ11.00 ಕ್ಕೆ ನಿಡಿಗಲ್ ಮನೆಗೆ ತಲುಪಲಿದೆ. ಶುಕ್ರವಾರ ಬೆಳಿಗ್ಗೆ(ಡಿ.1) ರಂದು 9 ಗಂಟೆಗೆ ನಿಡಿಗಲ್ ಮಸ್ಜಿದ್ ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಮನೆಯವರು ತಿಳಿಸಿದ್ದಾರೆ.