ಉಜಿರೆ: ಅನುಗ್ರಹ ಶಾಲಾ ವಾರ್ಷಿಕ ಕ್ರೀಡಾಕೂಟ

0

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವು ಶಾಲಾ ಸಂಚಾಲಕರಾದ ವಂ! ಫಾ! ಜೇಮ್ಸ್ ಡಿ’ಸೋಜ ರವರ ಅಧ್ಯಕ್ಷತೆಯಲ್ಲಿ ಜರಗಿತು. ಲಕ್ಷ್ಮೀ ಇಂಡಸ್ಟ್ರೀಸ್ ‘ಕನಸಿನ ಮನೆ’ ಮಾಲಕ ಮೋಹನ್ ಕುಮಾರ್ ರವರು ಕ್ರೀಡಾ ಧ್ವಜಾರೋಹಣವನ್ನು ನೇರವೇರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು ಹಾಗೂ ಮಕ್ಕಳಿಂದ ನಡೆದ ಆಕರ್ಷಣೇಯ ಪಥ ಸಂಚಲನದಲ್ಲಿ ಗೌರವ ರಕ್ಷೆಯನ್ನು ಸ್ವೀಕರಿಸಿದರು.

ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಕ್ಕಳ ಪ್ರಾರ್ಥನೆಯ ನಂತರ ವಿನಯಲತಾ ರವರು ಎಲ್ಲರನ್ನೂ ಸ್ವಾಗತಿಸಿದರು.ನಂತರ ಕ್ರೀಡಾಜ್ಯೋತಿಯ ಜೋತೆಗೆ ದೀಪ ಪ್ರಜ್ವಲನ ಮಾಡಲಾಯಿತು.

ಸಮಾರಂಭದ ಮುಖ್ಯ ಅತಿಥಿಗಳಾದ ಮೋಹನ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.ಹಾಗೂ ಅವರು ಕ್ರೀಡಾಕೂಟಕ್ಕೆ ಶುಭಾಶಯವನ್ನು ಕೋರಿದರು.ಸಮಾರಂಭದ ಅಧ್ಯಕ್ಷರಾದ ವಂ! ಫಾ! ಜೇಮ್ಸ್ ಡಿ’ಸೋಜಾ ರವರು ಅಧ್ಯಕ್ಷೀಯ ಭಾಷಣದ ಮೂಲಕ ಕ್ರೀಡಾಕೂಟಕ್ಕೆ ಶುಭಕೋರಿದರು. ತದನಂತರ ಮಕ್ಕಳಿಂದ ಅರೇಬಿಕ್ ನೃತ್ಯ ಪ್ರದರ್ಶಿಸಲಾಯಿತು.

ಶಾಲಾ ಪ್ರಾಂಶುಪಾಲರಾದ ವಂ! ಫಾ! ವಿಜಯ್ ಲೋಬೊ ರವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಆಂಟನಿ ಫೆರ್ನಾಂಡೀಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾಧ ಡಾ.ಪ್ರಶಾಂತ್ ಕುಮಾರ್, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅನಿಲ್ ಡಿ’ಸೋಜ ಹಾಗೂ ಜಾನೆಟ್ ರೋಡ್ರಿಗಸ್ ರವರು ಉಪಸ್ಥಿತರಿದ್ದರು.ಪ್ರಭಾಕರ ಶೆಟ್ಟಿಯವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಫಿಲೋಮಿನಾರವರು ಧನ್ಯವಾದವನ್ನಿತ್ತರು.ತದನಂತರ ಮಕ್ಕಳಿಗೆ ಕ್ರೀಡಾ ಸ್ಪರ್ಧೆಗಳು ನೇರವೇರಲ್ಪಟ್ಟು, ಸಮಾರೋಪ ಸಮಾರಂಭ ನಡೆದು ಕ್ರೀಡಾಕೂಟವು ಮುಕ್ತಾಯಗೊಂಡಿತು.

p>

LEAVE A REPLY

Please enter your comment!
Please enter your name here